عن عبد الله بن عمر رضي الله عنهما قال:
سَمِعَ النَّبِيُّ صَلَّى اللهُ عَلَيْهِ وَسَلَّمَ رَجُلًا يَعِظُ أَخَاهُ فِي الْحَيَاءِ، فَقَالَ: «الْحَيَاءُ مِنَ الْإِيمَانِ».
[صحيح] - [متفق عليه] - [صحيح مسلم: 36]
المزيــد ...
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ಸಂಕೋಚ ಪಡಬಾರದೆಂದು ಬುದ್ಧಿ ಹೇಳುವುದನ್ನು ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸಂಕೋಚವು ಸತ್ಯವಿಶ್ವಾಸದ ಒಂದು ಭಾಗವಾಗಿದೆ."
[صحيح] - [متفق عليه] - [صحيح مسلم - 36]
ಅತಿಯಾಗಿ ಸಂಕೋಚಪಡುವುದನ್ನು ಬಿಟ್ಟುಬಿಡಬೇಕೆಂದು ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ಬುದ್ಧಿ ಹೇಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಅವರು, ಸಂಕೋಚ ಪಡುವುದು ಸತ್ಯವಿಶ್ವಾಸದ ಭಾಗವಾಗಿದೆ ಮತ್ತು ಅದು ಒಳಿತಲ್ಲದೆ ಬೇರೇನನ್ನು ತರುವುದಿಲ್ಲ ಎಂದರು.
ಸಂಕೋಚ ಸ್ವಭಾವವು ಸುಂದರವಾದುದನ್ನು ಮಾಡಲು ಮತ್ತು ಹೊಲಸನ್ನು ಬಿಟ್ಟುಬಿಡಲು ಪ್ರೇರೇಪಿಸುತ್ತದೆ.