+ -

عَنْ أَنَسِ بْنِ مَالِكٍ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«الدُّعَاءُ لاَ يُرَدُّ بَيْنَ الأَذَانِ وَالإِقَامَةِ».

[صحيح] - [رواه أبو داود والترمذي والنسائي] - [سنن الترمذي: 212]
المزيــد ...

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅದಾನ್ ಮತ್ತು ಇಕಾಮತ್‌ನ ನಡುವಿನ ಪ್ರಾರ್ಥನೆ ತಿರಸ್ಕರಿಸಲ್ಪಡುವುದಿಲ್ಲ."

[صحيح] - [رواه أبو داود والترمذي والنسائي] - [سنن الترمذي - 212]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದಾನ್ ಮತ್ತು ಇಕಾಮತ್‌ನ ನಡುವಿನ ಪ್ರಾರ್ಥನೆಯ ಶ್ರೇಷ್ಠತೆಯನ್ನು ಮತ್ತು ಅದು ತಿರಸ್ಕರಿಸಲ್ಪಡುವುದಿಲ್ಲ ಹಾಗೂ ಅದು ಸ್ವೀಕಾರವಾಗಲು ಹೆಚ್ಚು ಅರ್ಹವಾಗಿದೆಯೆಂದು ವಿವರಿಸಿದ್ದಾರೆ. ಆದ್ದರಿಂದ ಆ ಸಮಯದಲ್ಲಿ ಅಲ್ಲಾಹನನ್ನು ಕರೆದು ಪ್ರಾರ್ಥಿಸಿರಿ.

ಹದೀಸಿನ ಪ್ರಯೋಜನಗಳು

  1. ಪ್ರಾರ್ಥನೆಗೆ ಈ ಸಮಯವು ಶ್ರೇಷ್ಠವೆಂದು ತಿಳಿಸಲಾಗಿದೆ.
  2. ಪ್ರಾರ್ಥಿಸುವವನು ಪ್ರಾರ್ಥನೆಯ ಶಿಷ್ಟಾಚಾರಗಳನ್ನು ಪಾಲಿಸಿದರೆ, ಶ್ರೇಷ್ಠ ಸ್ಥಳ ಮತ್ತು ಸಮಯಗಳಲ್ಲಿ ಪ್ರಾರ್ಥಿಸಿದರೆ, ಅಲ್ಲಾಹನಿಗೆ ಅವಿಧೇಯತೆ ತೋರುವುದರಿಂದ ದೂರವಾದರೆ, ಸಂಶಯ ಅನುಮಾನಗಳಲ್ಲಿ ಬೀಳದಂತೆ ಜಾಗರೂಕತೆ ಪಾಲಿಸಿದರೆ ಮತ್ತು ಅಲ್ಲಾಹನ ಬಗ್ಗೆ ಉತ್ತಮ ಭಾವನೆಯನ್ನಿಟ್ಟುಕೊಂಡರೆ, ಅಲ್ಲಾಹು ಇಚ್ಛಿಸಿದರೆ ಅವನ ಪ್ರಾರ್ಥನೆಗೆ ಉತ್ತರ ಸಿಗುವುದು ನಿಶ್ಚಿತ.
  3. ಪ್ರಾರ್ಥನೆಗೆ ಉತ್ತರ ದೊರೆಯುವ ಕುರಿತು, ಪ್ರಾರ್ಥನೆಯ ಷರತ್ತುಗಳು, ಸ್ತಂಭಗಳು ಮತ್ತು ಶಿಷ್ಟಾಚಾರಗಳನ್ನು ತಿಳಿಸಿದ ಬಳಿಕ ಮುನಾವಿ ಹೇಳಿದರು: "ಇವುಗಳಲ್ಲಿ ಯಾವುದನ್ನಾದರೂ ನಿರ್ವಹಿಸದಿದ್ದರೆ, ತನ್ನ ಪ್ರಾರ್ಥನೆಗೆ ಉತ್ತರ ದೊರೆಯದಿರುವುದಕ್ಕೆ ಅವನು ತನ್ನನ್ನೇ ಹೊರತು ಬೇರೆ ಯಾರನ್ನೂ ದೂಷಿಸದಿರಲಿ."
  4. ಪ್ರಾರ್ಥನೆಗೆ ಉತ್ತರ ದೊರೆಯುವುದು ಹೇಗೆ? ಒಂದೋ ಆ ಪ್ರಾರ್ಥನೆಗೆ ಇಹಲೋಕದಲ್ಲೇ ಉತ್ತರ ದೊರೆಯುತ್ತದೆ, ಅಥವಾ ಪ್ರಾರ್ಥಿಸಿದ್ದಕ್ಕೆ ಸಮಾನವಾಗಿರುವ ಒಂದು ಕೆಡುಕನ್ನು ಅವನಿಂದ ನಿವಾರಿಸಲಾಗುತ್ತದೆ, ಅಥವಾ ಅದರ ಪ್ರತಿಫಲವನ್ನು ಪರಲೋಕಕ್ಕಾಗಿ ತೆಗೆದಿಡಲಾಗುತ್ತದೆ. ಇವೆಲ್ಲವೂ ಅಲ್ಲಾಹನ ಯುಕ್ತಿ ಮತ್ತು ಕರುಣೆಗೆ ಅನುಗುಣವಾಗಿರುತ್ತದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು