+ -

عَنْ أَبِي هُرَيْرَةَ رضي الله عنه قَالَ: كَانَ رَسُولُ اللهِ صَلَّى اللهُ عَلَيْهِ وَسَلَّمَ يَقُولُ:
«اللهُمَّ أَصْلِحْ لِي دِينِي الَّذِي هُوَ عِصْمَةُ أَمْرِي، وَأَصْلِحْ لِي دُنْيَايَ الَّتِي فِيهَا مَعَاشِي، وَأَصْلِحْ لِي آخِرَتِي الَّتِي فِيهَا مَعَادِي، وَاجْعَلِ الْحَيَاةَ زِيَادَةً لِي فِي كُلِّ خَيْرٍ، وَاجْعَلِ الْمَوْتَ رَاحَةً لِي مِنْ كُلِّ شَرٍّ».

[صحيح] - [رواه مسلم] - [صحيح مسلم: 2720]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಪ್ರಾರ್ಥಿಸುತ್ತಿದ್ದರು:
"ಅಲ್ಲಾಹುಮ್ಮ ಅಸ್ಲಿಹ್ ಲೀ ದೀನೀ ಅಲ್ಲದೀ ಹುವ ಇಸ್ಮತು ಅಮ್ರೀ, ವಅಸ್ಲಿಹ್ ಲೀ ದುನ್ಯಾಯಾಯ ಅಲ್ಲತೀ ಫೀಹಾ ಮಆಶೀ, ವಅಸ್ಲಿಹ್ ಲೀ ಆಖಿರತೀ ಅಲ್ಲತೀ ಫೀಹಾ ಮಆದೀ, ವಜ್‌ಅಲಿಲ್ ಹಯಾತ ಝಿಯಾದತನ್ ಲೀ ಫೀ ಕುಲ್ಲಿ ಖೈರಿನ್, ವಜ್‌ಅಲಿಲ್ ಮೌತ ರಾಹತನ್ ಲೀ ಮಿನ್ ಕುಲ್ಲಿ ಶರ‍್ರ್" (ಓ ಅಲ್ಲಾಹ್, ನನ್ನ ಕೆಲಸ-ಕಾರ್ಯಗಳ ಸಂರಕ್ಷಣೆಯಾಗಿರುವ ನನ್ನ ಧರ್ಮವನ್ನು ನನಗೆ ಉತ್ತಮಗೊಳಿಸು, ನಾನು ಜೀವಿಸಬೇಕಾದ ನನ್ನ ಇಹಲೋಕವನ್ನು ನನಗೆ ಉತ್ತಮಗೊಳಿಸು, ನನ್ನ ಮರಳಿ ಹೋಗಬೇಕಾದ ನನ್ನ ಪರಲೋಕವನ್ನು ನನಗೆ ಉತ್ತಮಗೊಳಿಸು. ಜೀವನವನ್ನು ಎಲ್ಲಾ ರೀತಿಯ ಒಳಿತುಗಳಲ್ಲಿ ನನಗೆ ಹೆಚ್ಚಿಸಿಕೊಡು ಮತ್ತು ಮರಣವನ್ನು ಎಲ್ಲ ರೀತಿಯ ಕೆಡುಕುಗಳಿಂದ ನೆಮ್ಮದಿಯಾಗಿ ಮಾಡು).

[صحيح] - [رواه مسلم] - [صحيح مسلم - 2720]

ವಿವರಣೆ

ಯಾವ ಉದಾತ್ತ ಗುಣಗಳನ್ನು ಪೂರ್ಣಗೊಳಿಸಲು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಲಾಯಿತೋ ಅವುಗಳನ್ನು ಪೂರ್ಣರೂಪದಲ್ಲಿ ಒಳಗೊಳ್ಳುವ ಪ್ರಾರ್ಥನೆಯನ್ನು ಅವರು ಪ್ರಾರ್ಥಿಸಿದ್ದಾರೆ. ಆ ಉದಾತ್ತ ಗುಣಗಳೆಂದರೆ, ಧರ್ಮ, ಇಹಲೋಕ ಮತ್ತು ಪರಲೋಕ ಉತ್ತಮವಾಗಿರುವುದು. ಈ ಮೂರು ಸಮಗ್ರ ವಿಷಯಗಳನ್ನು ಉತ್ತಮಗೊಳಿಸಬೇಕೆಂದು ಅವರು ಈ ಸಂಕ್ಷಿಪ್ತ ಶಬ್ಧಗಳಿಂದ ಪ್ರಾರ್ಥಿಸಿದ್ದಾರೆ. ಧರ್ಮವನ್ನು ಉತ್ತಮಗೊಳಿಸಬೇಕೆಂದು ಪ್ರಾರ್ಥಿಸುವ ಮೂಲಕ ಅವರು ಆರಂಭಿಸಿದ್ದಾರೆ. ಏಕೆಂದರೆ, ಇಹಲೋಕ ಮತ್ತು ಪರಲೋಕವು ಉತ್ತಮವಾಗುವುದು ಅದರ ಮೇಲೆ ಅವಲಂಬಿತವಾಗಿದೆ. ಅವರು ಪ್ರಾರ್ಥಿಸಿದರು:
"ಓ ಅಲ್ಲಾಹ್! ನನಗೆ ನನ್ನ ಧರ್ಮವನ್ನು ಉತ್ತಮಗೊಳಿಸು" ಅಂದರೆ ಧಾರ್ಮಿಕ ಆಚಾರಗಳನ್ನು ಪೂರ್ಣರೂಪದಲ್ಲಿ ನಿರ್ವಹಿಸುವ ಭಾಗ್ಯವನ್ನು ಕರುಣಿಸು.
"ನನ್ನ ಕೆಲಸ-ಕಾರ್ಯಗಳ ಸಂರಕ್ಷಣೆಯಾಗಿರುವ" ಅಂದರೆ, ನನ್ನ ಎಲ್ಲಾ ಕೆಲಸ-ಕಾರ್ಯಗಳನ್ನು ಸಂರಕ್ಷಿಸುವ ಧರ್ಮವನ್ನು. ಏಕೆಂದರೆ, ನನ್ನ ಧರ್ಮವು ಹಾಳಾದರೆ ನನ್ನ ಕೆಲಸ-ಕಾರ್ಯಗಳೆಲ್ಲವೂ ಹಾಳಾಗುತ್ತವೆ, ಕೆಡುತ್ತವೆ ಮತ್ತು ನಷ್ಟವಾಗುತ್ತವೆ. ಇಹಲೋಕವು ಉತ್ತಮವಾಗುವುದರ ಮೂಲಕವಲ್ಲದೆ ಧರ್ಮವು ಉತ್ತಮವಾಗುವುದಿಲ್ಲ. ಆದ್ದರಿಂದ ಅವರು ಪ್ರಾರ್ಥಿಸಿದರು:
"ನನಗೆ ನನ್ನ ಇಹಲೋಕವನ್ನು ಉತ್ತಮಗೊಳಿಸು" ಅಂದರೆ, ನನಗೆ ದೈಹಿಕ ಆರೋಗ್ಯ, ಶಾಂತಿ, ಉಪಜೀವನ, ಉತ್ತಮ ಪತ್ನಿ, ಒಳ್ಳೆಯ ಮಕ್ಕಳು ಮುಂತಾದ ನಾನು ಬಯಸುವುದೆಲ್ಲವನ್ನೂ ನೀಡು. ಅವು ಧರ್ಮಸಮ್ಮತವಾಗಿರಲಿ ಮತ್ತು ನಿನ್ನನ್ನು ಅನುಸರಿಸಲು ನನಗೆ ಸಹಾಯ ಮಾಡುವಂತಿರಲಿ. ನಂತರ, ಇಹಲೋಕವನ್ನು ಏಕೆ ಉತ್ತಮಗೊಳಿಸಬೇಕೆಂದು ತಿಳಿಸುತ್ತಾ ಅವರು ಪ್ರಾರ್ಥಿಸಿದರು:
"ನಾನು ಬದುಕಬೇಕಾದ" ಅಂದರೆ, ನಾನು ಬದುಕು ಸಾಗಿಸಬೇಕಾದ ಸ್ಥಳ ಮತ್ತು ಸಮಯವಾಗಿರುವ ಇಹಲೋಕವನ್ನು.
"ನನ್ನ ಮರಳಿ ಹೋಗಬೇಕಾದ ನನ್ನ ಪರಲೋಕವನ್ನು ನನಗೆ ಉತ್ತಮಗೊಳಿಸು" ಅಂದರೆ, ನಿನ್ನನ್ನು ಭೇಟಿಯಾಗಲು ನಾನು ಮರಳಿ ಹೋಗಬೇಕಾದ ಪರಲೋಕವನ್ನು. ಇದು ನನ್ನ ಕರ್ಮಗಳು ಉತ್ತಮವಾಗುವುದು, ಆರಾಧನೆ, ನಿಷ್ಕಳಂಕತೆ, ಉತ್ತಮ ಅಂತ್ಯ ಮುಂತಾದ ಅಲ್ಲಾಹು ಮನುಷ್ಯನಿಗೆ ನೀಡುವ ಭಾಗ್ಯವನ್ನು ಅವಲಂಬಿಸಿಕೊಂಡಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪರಲೋಕವನ್ನು ಇಹಲೋಕದ ನಂತರ ಉಲ್ಲೇಖಿಸಿದ್ದಾರೆ. ಏಕೆಂದರೆ, ಇಹಲೋಕವು ಪರಲೋಕಕ್ಕಿರುವ ಮಾರ್ಗವಾಗಿದೆ. ಯಾರು ಅಲ್ಲಾಹು ಉದ್ದೇಶಿಸಿದ ರೀತಿಯಲ್ಲಿ ತನ್ನ ಇಹಲೋಕದಲ್ಲಿ ನೇರವಾಗಿ ನೆಲೆಗೊಳ್ಳುತ್ತಾನೋ ಅವನ ಪರಲೋಕವು ಕೂಡ ಅವನಿಗೆ ನೇರವಾಗುತ್ತದೆ ಮತ್ತು ಅವನು ಅಲ್ಲಿ ಸಂತೋಷಪಡುತ್ತಾನೆ.
"ಜೀವನವನ್ನು" ಅಂದರೆ ನನ್ನ ಪೂರ್ತಿ ಆಯುಷ್ಯವನ್ನು "ಎಲ್ಲಾ ರೀತಿಯ ಒಳಿತುಗಳಲ್ಲಿ ನನಗೆ ಹೆಚ್ಚಿಸಿಕೊಡು" ಅಂದರೆ ನಾನು ಅದರಲ್ಲಿ ಹೆಚ್ಚು ಹೆಚ್ಚು ಸತ್ಕರ್ಮಗಳನ್ನು ನಿರ್ವಹಿಸುವಂತೆ ಮಾಡು. "ಮರಣವನ್ನು" ಮತ್ತು ಅದು ಬೇಗನೇ ಬರುವುದನ್ನು "ಎಲ್ಲ ರೀತಿಯ ಕೆಡುಕುಗಳಿಂದ ನೆಮ್ಮದಿಯಾಗಿ ಮಾಡು" ಅಂದರೆ, ಎಲ್ಲಾ ರೀತಿಯ ಪರೀಕ್ಷೆಗಳು, ಕಷ್ಟಗಳು, ಪಾಪಗಳು ಮತ್ತು ನಿರ್ಲಕ್ಷ್ಯಗಳಿಂದ ಹಾಗೂ ಇಹಲೋಕದ ಪ್ರಯಾಸ-ದುಃಖಗಳಿಂದ ಮುಕ್ತಿಯಾಗಿ ಮಾಡು. ನೆಮ್ಮದಿ ಸಿಗುವಂತೆ ಮಾಡು.

ಹದೀಸಿನ ಪ್ರಯೋಜನಗಳು

  1. ಧರ್ಮವು ಅತಿಪ್ರಮುಖ ವಿಷಯವಾಗಿದೆ. ಈ ಕಾರಣದಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥನೆಯನ್ನು ಅದರಿಂದ ಪ್ರಾರಂಭಿಸಿದ್ದಾರೆ.
  2. ಧರ್ಮವು ಮನುಷ್ಯನಿಗೆ ಒಂದು ಸುರಕ್ಷೆಯಾಗಿದ್ದು ಅದು ಎಲ್ಲಾ ಕೆಡುಕುಗಳಿಂದ ರಕ್ಷಿಸುತ್ತದೆ.
  3. ಧರ್ಮ ಮತ್ತು ಪರಲೋಕವು ಉತ್ತಮವಾಗಲು ಇಹಲೋಕದ ವಿಷಯಗಳಿಗಾಗಿ ಪ್ರಾರ್ಥಿಸಬಹುದೆಂದು ತಿಳಿಸಲಾಗಿದೆ.
  4. ಧರ್ಮದಲ್ಲಿ ಪರೀಕ್ಷೆ ಉಂಟಾಗಬಹುದೆಂದು ಹೆದರಿ ಸಾವನ್ನು ಬಯಸುವುದು ಅಥವಾ ಹುತಾತ್ಮನಾಗಿ ಸಾಯಲು ಅಲ್ಲಾಹನಲ್ಲಿ ಬೇಡುವುದು ಅಸಹ್ಯಕರ (ಕರಾಹತ್) ಅಲ್ಲ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು