عَنِ أَبِي مُوسَى رضي الله عنه، عَنِ النَّبِيِّ صَلَّى اللهُ عَلَيْهِ وَسَلَّمَ أَنَّهُ كَانَ يَدْعُو بِهَذَا الدُّعَاءِ:
«رَبِّ اغْفِرْ لِي خَطِيئَتِي وَجَهْلِي، وَإِسْرَافِي فِي أَمْرِي كُلِّهِ، وَمَا أَنْتَ أَعْلَمُ بِهِ مِنِّي، اللَّهُمَّ اغْفِرْ لِي خَطَايَايَ، وَعَمْدِي وَجَهْلِي وَهَزْلِي، وَكُلُّ ذَلِكَ عِنْدِي، اللَّهُمَّ اغْفِرْ لِي مَا قَدَّمْتُ وَمَا أَخَّرْتُ، وَمَا أَسْرَرْتُ وَمَا أَعْلَنْتُ، أَنْتَ المُقَدِّمُ وَأَنْتَ المُؤَخِّرُ، وَأَنْتَ عَلَى كُلِّ شَيْءٍ قَدِيرٌ».
[صحيح] - [متفق عليه] - [صحيح البخاري: 6398]
المزيــد ...
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಾರ್ಥನೆಯನ್ನು ಪಠಿಸುತ್ತಿದ್ದರು:
"ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕವಾಗಿ ಮಾಡಿದ್ದನ್ನು, ಅವಿವೇಕತನದಿಂದ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ, ಹಿಂದೆ ಬಿಟ್ಟಿರುವ, ಬಹಿರಂಗಪಡಿಸಿರುವ ಮತ್ತು ರಹಸ್ಯವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು. ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು."
[صحيح] - [متفق عليه] - [صحيح البخاري - 6398]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಗ್ರ ಪ್ರಾರ್ಥನೆಗಳಲ್ಲಿ ಒಂದು ಹೀಗಿತ್ತು:
"ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು ಕ್ಷಮಿಸು" ಅಂದರೆ ನಾನು ಮಾಡಿದ ಪಾಪಗಳನ್ನು, "ಅವಿವೇಕತನವನ್ನು" ಅಂದರೆ ಅಜ್ಞಾನ ನಿಮಿತ್ತ ನನ್ನಿಂದ ಸಂಭವಿಸಿದ್ದನ್ನು ಕ್ಷಮಿಸು.
"ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು" ಅಂದರೆ ನನ್ನ ಕೆಲಸ-ಕಾರ್ಯಗಳಲ್ಲಿ ನಾನು ಮಾಡಿದ ಕೊರತೆಗಳನ್ನು ಮತ್ತು ಅವುಗಳಲ್ಲಿ ಹದ್ದು ಮೀರಿದ್ದನ್ನು ಕ್ಷಮಿಸು.
"ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ" ಅಂದರೆ ಓ ಅಲ್ಲಾಹ್, ನೀನು ತಿಳಿದಿರುವ ಮತ್ತು ನಾನು ಮರೆತಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು.
ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕ ಮಾಡಿದ್ದನ್ನು" ಅಂದರೆ ಪಾಪಗಳೆಂದು ತಿಳಿದಿದ್ದೂ ನನ್ನಿಂದ ಉದ್ದೇಶಪೂರ್ವಕ ಸಂಭವಿಸಿದ ಪಾಪಗಳನ್ನು ಕ್ಷಮಿಸು.
"ಗಂಭೀರವಾಗಿ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು" ಅಂದರೆ, ತಮಾಷೆಗಾಗಿ ನನ್ನಿಂದ ಸಂಭವಿಸಿದ ಪಾಪಗಳನ್ನು ಮತ್ತು ಎರಡೂ ಸ್ಥಿತಿಗಳಲ್ಲಿ ನನ್ನಿಂದ ಸಂಭವಿಸಿದ ಪಾಪಗಳನ್ನು ಕ್ಷಮಿಸು.
"ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ" ಅಂದರೆ ನಾನು ಮೇಲೆ ಹೇಳಿದ ಎಲ್ಲಾ ಪಾಪಗಳು ಮತ್ತು ನ್ಯೂನತೆಗಳನ್ನು ಕ್ಷಮಿಸು.
ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ ಪಾಪಗಳನ್ನು ಕ್ಷಮಿಸು" ಅಂದರೆ ಈಗಾಗಲೇ ಮಾಡಿರುವ ಪಾಪಗಳನ್ನು, "ಹಿಂದೆ ಬಿಟ್ಟಿರುವ" ಅಂದರೆ ಮುಂದೆ ಮಾಡಲಿರುವ ಪಾಪಗಳನ್ನು ಕ್ಷಮಿಸು.
"ರಹಸ್ಯವಾಗಿ ಮಾಡಿರುವ" ಅಂದರೆ ಅಡಗಿಕೊಂಡು ಮಾಡಿರುವ ಪಾಪಗಳನ್ನು, "ಬಹಿರಂಗಪಡಿಸಿರುವ" ಅಂದರೆ ಬಹಿರಂಗವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು.
"ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು." ನಿನ್ನ ಸೃಷ್ಟಿಗಳಲ್ಲಿ ನೀನು ಇಚ್ಛಿಸುವವರನ್ನು ನೀನು ನಿನ್ನ ಕರುಣೆಯ ಕಡೆಗೆ ತರುವೆ ಮತ್ತು ನೀನು ಇಷ್ಟಪಡುವುದನ್ನು ಮಾಡುವ ಸೌಭಾಗ್ಯವನ್ನು ಕರುಣಿಸುವೆ. ನೀನು ಇಚ್ಛಿಸುವವರನ್ನು ಕೈ ಬಿಡುವ ಮೂಲಕ ಅವರನ್ನು ಇದರಿಂದ ದೂರಗೊಳಿಸುವೆ. ನೀನು ಹಿಂದಕ್ಕೆ ತಳ್ಳಿದವರನ್ನು ಮುಂದಕ್ಕೆ ತರಲು ಮತ್ತು ನೀನು ಮುಂದಕ್ಕೆ ತಂದವರನ್ನು ಹಿಂದಕ್ಕೆ ತಳ್ಳಲು ಯಾರಿಗೂ ಸಾಧ್ಯವಿಲ್ಲ.
"ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು." ಅಂದರೆ, ನೀನು ಸಂಪೂರ್ಣ ಸಾಮರ್ಥ್ಯವುಳ್ಳವನು ಮತ್ತು ಪೂರ್ಣ ಇರಾದೆಯುಳ್ಳವನು. ನೀನು ಇಚ್ಛಿಸುವುದೆಲ್ಲವನ್ನೂ ಮಾಡುವವನು.