عن سَمُرَة بن جندبٍ رضي الله عنه قال: قال رسول الله صلى الله عليه وسلم:
«أَحَبُّ الْكَلَامِ إِلَى اللهِ أَرْبَعٌ: سُبْحَانَ اللهِ، وَالْحَمْدُ لِلهِ، وَلَا إِلَهَ إِلَّا اللهُ، وَاللهُ أَكْبَرُ، لَا يَضُرُّكَ بِأَيِّهِنَّ بَدَأْتَ».
[صحيح] - [رواه مسلم] - [صحيح مسلم: 2137]
المزيــد ...
ಸಮುರ ಬಿನ್ ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆ: ಸುಬ್‌ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮತ್ತು ಅಲ್ಲಾಹು ಅಕ್ಬರ್. ನೀನು ಯಾವುದರಿಂದ ಪ್ರಾರಂಭಿಸಿದರೂ ತೊಂದರೆಯಿಲ್ಲ."
[صحيح] - [رواه مسلم] - [صحيح مسلم - 2137]
ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆಯೆಂದು ಪ್ರವಾದಿಯವರು ಇಲ್ಲಿ ವಿವರಿಸುತ್ತಿದ್ದಾರೆ. ಅವು:
ಸುಬ್‌ಹಾನಲ್ಲಾಹ್: ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆ ಅಥವಾ ಕೊರತೆಗಳಿಂದ ಪರಿಶುದ್ಧಗೊಳಿಸುವುದು.
ಅಲ್-ಹಮ್ದುಲಿಲ್ಲಾಹ್: ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ವರ್ಣಿಸುವುದಾಗಿದೆ.
ಲಾ ಇಲಾಹ ಇಲ್ಲಲ್ಲಾಹ್: ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ.
ಅಲ್ಲಾಹು ಅಕ್ಬರ್: ಅಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು, ಮಹಾಮಹಿಮನು ಮತ್ತು ಪ್ರತಾಪವುಳ್ಳವನು.
ಇವುಗಳ ಶ್ರೇಷ್ಠತೆ ಮತ್ತು ಇವುಗಳಿಗೆ ದೊರಕುವ ಪ್ರತಿಫಲವನ್ನು ಪಡೆಯಬೇಕಾದರೆ ಇವುಗಳನ್ನು ಅನುಕ್ರಮವಾಗಿಯೇ ಹೇಳಬೇಕೆಂಬ ನಿಬಂಧನೆಯಿಲ್ಲ.