عن أبي مسعود الأنصاري رضي الله عنه قال:
جَاءَ رَجُلٌ إِلَى النَّبِيِّ صَلَّى اللهُ عَلَيْهِ وَسَلَّمَ فَقَالَ: إِنِّي أُبْدِعَ بِي فَاحْمِلْنِي، فَقَالَ: «مَا عِنْدِي»، فَقَالَ رَجُلٌ: يَا رَسُولَ اللهِ، أَنَا أَدُلُّهُ عَلَى مَنْ يَحْمِلُهُ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «مَنْ دَلَّ عَلَى خَيْرٍ فَلَهُ مِثْلُ أَجْرِ فَاعِلِهِ».
[صحيح] - [رواه مسلم] - [صحيح مسلم: 1893]
المزيــد ...
ಅಬೂ ಮಸ್‌ಊದ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸುಸ್ತಾಗಿಬಿಟ್ಟಿದೆ. ಆದ್ದರಿಂದ ನನಗೆ ಸವಾರಿ ಮಾಡುವ ಒಂದು ಒಂಟೆಯನ್ನು ಕೊಡಿ." ಅವರು ಹೇಳಿದರು: "ನನ್ನ ಬಳಿ ಒಂಟೆಯಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆ ಕೊಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಳಿತನ್ನು ತೋರಿಸಿಕೊಡುತ್ತಾರೋ ಅವನಿಗೆ ಆ ಒಳಿತು ಮಾಡಿದ ವ್ಯಕ್ತಿಗೆ ದೊರಕುವಷ್ಟೇ ಪ್ರತಿಫಲ ದೊರಕುತ್ತದೆ."
[صحيح] - [رواه مسلم] - [صحيح مسلم - 1893]
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸತ್ತಿದೆ. ನನ್ನನ್ನು ನನ್ನ ಊರಿಗೆ ತಲುಪಿಸುವ ಒಂದು ಒಂಟೆಯನ್ನು ಕೊಡಿ." ಆದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನಲ್ಲಿ ಸವಾರಿ ಮಾಡುವ ಒಂಟೆಯಿಲ್ಲವೆಂದು ಹೇಳಿದರು. ಆಗ ಅಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆಯನ್ನು ನೀಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಒಂಟೆಯನ್ನು ದಾನ ಮಾಡುವ ವ್ಯಕ್ತಿಗೆ ಸಿಗುವ ಪ್ರತಿಫಲದಲ್ಲಿ ಇವನೂ ಭಾಗಿಯಾಗುತ್ತಾನೆಂದು ಹೇಳಿದರು. ಏಕೆಂದರೆ ಅವನು ಒಂಟೆಯ ಅಗತ್ಯವಿರುವ ಆ ವ್ಯಕ್ತಿಗೆ ಒಂಟೆ ನೀಡುವ ವ್ಯಕ್ತಿಯನ್ನು ತೋರಿಸಿಕೊಟ್ಟಿದ್ದಾನೆ.