+ -

عن أبي هريرة رضي الله عنه: أن رسول الله صلى الله عليه وسلم قال:
«لَا تَجْعَلُوا بُيُوتَكُمْ مَقَابِرَ، إِنَّ الشَّيْطَانَ يَنْفِرُ مِنَ الْبَيْتِ الَّذِي تُقْرَأُ فِيهِ سُورَةُ الْبَقَرَةِ».

[صحيح] - [رواه مسلم] - [صحيح مسلم: 780]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ. ನಿಶ್ಚಯವಾಗಿಯೂ ಸೂರ ‌ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ."

[صحيح] - [رواه مسلم] - [صحيح مسلم - 780]

ವಿವರಣೆ

ಮನೆಗಳಲ್ಲಿ ನಮಾಝ್ ಮಾಡದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿರೋಧಿಸುತ್ತಾರೆ. ಏಕೆಂದರೆ ಇದರಿಂದ ಮನೆಗಳು ಸಮಾಧಿಸ್ಥಳವಾಗಿ ಮಾರ್ಪಡುತ್ತದೆ. ಸಮಾಧಿಸ್ಥಳವು ನಮಾಝ್ ಮಾಡುವ ಸ್ಥಳವಲ್ಲ.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರ ‌ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ ಎಂದು ತಿಳಿಸುತ್ತಾರೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية الموري المالاجاشية الإيطالية الولوف البلغارية الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಮನೆಗಳಲ್ಲಿ ಆರಾಧನೆಗಳನ್ನು ಮತ್ತು ಐಚ್ಛಿಕ ನಮಾಝ್‌ಗಳನ್ನು ಹೆಚ್ಚಿಸಲು ಈ ಹದೀಸಿನಲ್ಲಿ ಪ್ರೋತ್ಸಾಹವಿದೆ.
  2. ಸಮಾಧಿಸ್ಥಳದಲ್ಲಿ ನಮಾಝ್ ಮಾಡಬಾರದು. ಏಕೆಂದರೆ ಅದು ಶಿರ್ಕ್ (ಬಹುದೇವಾರಾಧನೆ)ಗೆ ಮತ್ತು ಸಮಾಧಿಗಳಲ್ಲಿರುವ ವ್ಯಕ್ತಿಗಳ ವಿಷಯದಲ್ಲಿ ಹದ್ದು ಮೀರುವುದಕ್ಕೆ ಕಾರಣವಾಗುತ್ತದೆ. ಆದರೆ ಅಂತ್ಯಕ್ರಿಯೆಯ (ಜನಾಝ) ನಮಾಝನ್ನು ಇದರಿಂದ ಹೊರತುಪಡಿಸಲಾಗಿದೆ.
  3. ಸಮಾಧಿಗಳ ಬಳಿ ನಮಾಝ್ ಮಾಡಬಾರದೆಂಬ ವಿರೋಧವು ಸಹಾಬಿಗಳ ನಡುವೆ ಅಂಗೀಕೃತವಾಗಿತ್ತೆಂದು ಈ ಹದೀಸಿನಿಂದ ತಿಳಿಯುತ್ತದೆ. ಈ ಕಾರಣದಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯಲ್ಲಿ ನಮಾಝ್ ನಿರ್ವಹಿಸದಿದ್ದರೆ ಅದು ಸಮಾಧಿ ಸ್ಥಳವಾಗುತ್ತದೆಯೆಂದು ಹೇಳಿದರು. ಏಕೆಂದರೆ ಸಮಾಧಿಗಳ ಬಳಿ ನಮಾಝ್ ಮಾಡುವುದನ್ನು ನಿಷೇಧಿಸಲಾಗಿದೆ.
ಇನ್ನಷ್ಟು