عَنْ عُقْبَةَ بْنِ عَامِرٍ رَضيَ اللهُ عنهُ قَالَ: قَالَ لِي رَسُولُ اللهِ صَلَّى اللهُ عَلَيْهِ وَسَلَّمَ:
«أُنْزِلَ -أَوْ أُنْزِلَتْ- عَلَيَّ آيَاتٌ لَمْ يُرَ مِثْلُهُنَّ قَطُّ، الْمُعَوِّذَتَيْنِ».

[صحيح] - [رواه مسلم] - [صحيح مسلم: 814]
المزيــد ...

ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಂದಿಗೆ ಹೇಳಿದರು:
"ನನ್ನ ಮೇಲೆ ಕೆಲವು ವಚನಗಳು ಅವತೀರ್ಣವಾಗಿವೆ - ಅಥವಾ ಇಳಿಸಲಾಗಿವೆ - ಅವುಗಳಂತಹಗಳನ್ನು ಹಿಂದೆಂದೂ ನೋಡಲಾಗಿರಲಿಲ್ಲ: (ಅವು) ಅಲ್-ಮುಅವ್ವಿದತೈನ್ (ರಕ್ಷಣೆ ಬೇಡುವ ಎರಡು ಸೂರಃಗಳು)".

[صحيح] - [رواه مسلم] - [صحيح مسلم - 814]

ವಿವರಣೆ

ಉಕ್ಬ ಇಬ್ನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿನ್ನೆ ರಾತ್ರಿ ಅಲ್ಲಾಹು ನನ್ನ ಮೇಲೆ ಕೆಲವು ವಚನಗಳನ್ನು ಅವತೀರ್ಣಗೊಳಿಸಿದ್ದಾನೆ. ಅವುಗಳಂತಹ ವಚನಗಳನ್ನು ಹಿಂದೆಂದೂ ನೋಡಲಾಗಿರಲಿಲ್ಲ - ಅಂದರೆ ರಕ್ಷಣೆ ಕೋರುವ ವಿಷಯದಲ್ಲಿ - ಅವು ಅಲ್-ಮುಅವ್ವಿದತೈನ್. ಅಂದರೆ ಸೂರ ಖುಲ್ ಅಊದು ಬಿರಬ್ಬಿಲ್ ಫಲಖ್ ಮತ್ತು ಸೂರಃ ಖುಲ್ ಅಊದು ಬಿರಬ್ಬಿನ್ನಾಸ್.

ಹದೀಸಿನ ಪ್ರಯೋಜನಗಳು

  1. ಈ ಎರಡು ಸೂರಃಗಳ ಮಹಾನ್ ಶ್ರೇಷ್ಠತೆಯನ್ನು ವಿವರಿಸಲಾಗಿದೆ.
  2. ಎಲ್ಲಾ ಕೆಡುಕುಗಳಿಂದ ರಕ್ಷಣೆ ಕೋರಲು ಇವೆರಡನ್ನೂ (ಪಠಿಸಲು) ಪ್ರೋತ್ಸಾಹಿಸಲಾಗಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಇನ್ನಷ್ಟು (36)
ಇನ್ನಷ್ಟು