عن أبي الدرداء رضي الله عنه عن النبي صلى الله عليه وسلم قال:
«مَنْ رَدَّ عَنْ عِرْضِ أَخِيهِ رَدَّ اللهُ عَنْ وَجْهِهِ النَّارَ يَوْمَ الْقِيَامَةِ».
[صحيح] - [رواه الترمذي وأحمد] - [سنن الترمذي: 1931]
المزيــد ...
ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನ ಮುಖವನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದಿಂದ ಕಾಪಾಡುತ್ತಾನೆ."
[صحيح] - [رواه الترمذي وأحمد] - [سنن الترمذي - 1931]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ತನ್ನ ಮುಸಲ್ಮಾನ ಸಹೋದರನ ಬಗ್ಗೆ ಯಾರಾದರೂ ದೂಷಣೆ ಮಾಡುವುದನ್ನು ಕೇಳುವಾಗ, ಆ ದೂಷಣೆಯನ್ನು ಅಥವಾ ಕೆಟ್ಟ ಮಾತುಗಳನ್ನು ತಡೆಯುವ ಮೂಲಕ ಯಾರು ಅವನ ಘನತೆಯನ್ನು ಕಾಪಾಡುತ್ತಾನೋ, ಅವನನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದ ಶಿಕ್ಷೆಯಿಂದ ಕಾಪಾಡುತ್ತಾನೆ.