عن أبي هريرة رضي الله عنه عن النبي صلى الله عليه وسلم قال:
«كَلِمَتَانِ خَفِيفَتَانِ عَلَى اللِّسَانِ، ثَقِيلَتَانِ فِي الْمِيزَانِ، حَبِيبَتَانِ إِلَى الرَّحْمَنِ: سُبْحَانَ اللهِ الْعَظِيمِ، سُبْحَانَ اللهِ وَبِحَمْدِهِ».
[صحيح] - [متفق عليه] - [صحيح البخاري: 6406]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ನಾಲಗೆಯಲ್ಲಿ ಹಗುರವಾದ, ತಕ್ಕಡಿಯಲ್ಲಿ ಭಾರವಾದ ಮತ್ತು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಇಷ್ಟವಾದ ಎರಡು ವಚನಗಳು: ಸುಬ್‌ಹಾನಲ್ಲಾಹಿಲ್ ಅಝೀಮ್ ಮತ್ತು ಸುಬ್‌ಹಾನಲ್ಲಾಹಿ ವಬಿಹಮ್ದಿಹೀ.”
[صحيح] - [متفق عليه] - [صحيح البخاري - 6406]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮನುಷ್ಯನು ಯಾವುದೇ ಕಷ್ಟವಿಲ್ಲದೆ ಮತ್ತು ಎಲ್ಲಾ ಸಮಯಗಳಲ್ಲೂ ಉಚ್ಛರಿಸಬಹುದಾದ ಎರಡು ವಚನಗಳಿದ್ದು, ಅವು ತಕ್ಕಡಿಯಲ್ಲಿ ತೂಗುವಾಗ ಮಹಾ ಪ್ರತಿಫಲವನ್ನು ಹೊಂದಿರುತ್ತವೆ ಮತ್ತು ಪರಮ ದಯಾಮಯನಾದ ಅಲ್ಲಾಹನಿಗೆ ಅವು ಬಹಳ ಇಷ್ಟವಾಗಿವೆ. ಅವು:
ಸುಬ್‌ಹಾನಲ್ಲಾಹಿಲ್ ಅಝೀಮ್ ಮತ್ತು ಸುಬ್‌ಹಾನಲ್ಲಾಹಿ ವಬಿಹಮ್ದಿಹೀ. ಏಕೆಂದರೆ, ಇವು ಅಲ್ಲಾಹನ ಮಹಾಮಹಿಮೆ ಮತ್ತು ಸಂಪೂರ್ಣತೆಯನ್ನು ವರ್ಣಿಸುವುದರ ಜೊತೆಗೆ ಸರ್ವಶಕ್ತನಾದ ಅವನನ್ನು ಎಲ್ಲಾ ರೀತಿಯ ಕುಂದು-ಕೊರತೆಗಳಿಂದ ಪರಿಶುದ್ಧಗೊಳಿಸುತ್ತವೆ.