عَنْ أَبِي عَبْدِ الرَّحْمَنِ السُّلَمي رحمه الله قَالَ:
حَدَّثَنَا مَنْ كَانَ يُقْرِئُنَا مِنْ أَصْحَابِ النَّبِيِّ صَلَّى اللهُ عَلَيْهِ وَسَلَّمَ أَنَّهُمْ كَانُوا يَقْتَرِئُونَ مِنْ رَسُولِ اللهِ صَلَّى اللهُ عَلَيْهِ وَسَلَّمَ عَشْرَ آيَاتٍ، فَلَا يَأْخُذُونَ فِي الْعَشْرِ الْأُخْرَى حَتَّى يَعْلَمُوا مَا فِي هَذِهِ مِنَ الْعِلْمِ وَالْعَمَلِ، قَالُوا: فَعَلِمْنَا الْعِلْمَ وَالْعَمَلَ.
[حسن] - [رواه أحمد] - [مسند أحمد: 23482]
المزيــد ...
ಅಬೂ ಅಬ್ದುರ್‍ರಹ್ಮಾನ್ ಸುಲಮಿ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು:
ಪ್ರವಾದಿಯವರ ಸಂಗಡಿಗರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪೈಕಿ ನಮಗೆ ಕುರ್‌ಆನ್ ಕಲಿಸಿಕೊಡುತ್ತಿದ್ದವರು ಹೇಳುತ್ತಿದ್ದರು: ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ. ಅವರು ಹೇಳುತ್ತಿದ್ದರು: ನಾವು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದೆವು."
[حسن] - [رواه أحمد] - [مسند أحمد - 23482]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ಆ ಹತ್ತು ವಚನಗಳಲ್ಲಿರುವ ಜ್ಞಾನವನ್ನು ಕಲಿತು ಅದರ ಪ್ರಕಾರ ಕರ್ಮಗಳನ್ನು ಮಾಡುವ ತನಕ ಅವರು ಮುಂದಿನ ಹತ್ತು ವಚನಗಳನ್ನು ಕಲಿಯಲು ಹೋಗುತ್ತಿರಲಿಲ್ಲ. ಅವರು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದರು.