+ -

عن أبي مسعود رضي الله عنه قال: قال النبي صلى الله عليه وسلم:
«مَنْ قَرَأَ بِالْآيَتَيْنِ مِنْ آخِرِ سُورَةِ الْبَقَرَةِ فِي لَيْلَةٍ كَفَتَاهُ».

[صحيح] - [متفق عليه] - [صحيح البخاري: 5009]
المزيــد ...

ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಅವೆರಡು ಸಾಕು."

[صحيح] - [متفق عليه] - [صحيح البخاري - 5009]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಎಲ್ಲಾ ಕೆಡುಕು ಮತ್ತು ತೊಂದರೆಗಳಿಂದ ರಕ್ಷಣೆ ಪಡೆಯಲು ಅಲ್ಲಾಹು ಆ ಎರಡು ಶ್ಲೋಕಗಳು ಸಾಕಾಗುವಂತೆ ಮಾಡುತ್ತಾನೆ. ಅವರಿಗೆ ಆ ರಾತ್ರಿಯಲ್ಲಿ ಪೂರ್ಣವಾಗಿ ನಮಾಝ್ ನಿರ್ವಹಿಸುವುದಕ್ಕೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ರಾತ್ರಿಯಲ್ಲಿ ಹೇಳುವ ಎಲ್ಲಾ ದಿಕ್ರ್‌ಗಳಿಗೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಬೇರೆ ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ರಾತ್ರಿ ನಮಾಝಿನಲ್ಲಿ ದೀರ್ಘವಾಗಿ ಕುರ್‌ಆನ್ ಪಠಿಸುವುದಕ್ಕೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಇತರ ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ವಿದ್ವಾಂಸರಿಂದ ಬೇರೆ ಅಭಿಪ್ರಾಯಗಳೂ ವರದಿಯಾಗಿವೆ. ಬಹುಶಃ ಈ ಎಲ್ಲಾ ಅಭಿಪ್ರಾಯಗಳು ಸರಿಯಾಗಿದ್ದು ಎಲ್ಲವನ್ನೂ ಈ ಹದೀಸ್ ಒಳಗೊಳ್ಳಬಹುದು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية الموري المالاجاشية الإيطالية الولوف البلغارية الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಸೂರ ಬಕರದ ಕೊನೆಯ ಎರಡು ಶ್ಲೋಕಗಳ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ. ಅವು "ಆಮನ ರ್‍ರಸೂಲು" ಎಂಬಲ್ಲಿಂದ ಪ್ರಾರಂಭವಾಗಿ ಸೂರದ ಕೊನೆಯ ವರೆಗಿನ ಶ್ಲೋಕಗಳಾಗಿವೆ. (ಸೂರ ಬಕರ 285-286)
  2. ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸಿದರೆ ಅದು ಕೆಡುಕು, ತೊಂದರೆ ಮತ್ತು ಶೈತಾನನನ್ನು ದೂರವಿಡುತ್ತದೆ.
  3. ರಾತ್ರಿ ಸೂರ್ಯಾಸ್ತದಿಂದ ಪ್ರಾರಂಭವಾಗಿ ಪ್ರಭಾತೋದಯಕ್ಕೆ ಕೊನೆಗೊಳ್ಳುತ್ತದೆ.
ಇನ್ನಷ್ಟು