عَن عَبْدِ اللَّهِ بنِ مَسْعُودٍ رَضِيَ اللَّهُ عَنْهُ قَالَ: كُنَّا مَعَ النَّبِيِّ صَلَّى اللهُ عَلَيْهِ وَسَلَّمَ، فَقَالَ:
«مَنِ اسْتَطَاعَ البَاءَةَ فَلْيَتَزَوَّجْ، فَإِنَّهُ أَغَضُّ لِلْبَصَرِ، وَأَحْصَنُ لِلْفَرْجِ، وَمَنْ لَمْ يَسْتَطِعْ فَعَلَيْهِ بِالصَّوْمِ، فَإِنَّهُ لَهُ وِجَاءٌ».
[صحيح] - [متفق عليه] - [صحيح البخاري: 1905]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆವು. ಆಗ ಅವರು ಹೇಳಿದರು:
"ವಿವಾಹವಾಗುವ ಸಾಮರ್ಥ್ಯವಿರುವವರು ವಿವಾಹವಾಗಬೇಕು. ಏಕೆಂದರೆ, ದೃಷ್ಟಿಯನ್ನು ತಗ್ಗಿಸಲು ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅದು ಹೆಚ್ಚು ಪರಿಣಾಮಕಾರಿಯಾಗಿದೆ. ವಿವಾಹವಾಗುವ ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಅವನಿಗೆ ಗುರಾಣಿಯಾಗಿದೆ."
[صحيح] - [متفق عليه] - [صحيح البخاري - 1905]
ಸಂಭೋಗ ಮಾಡುವ ಸಾಮರ್ಥ್ಯವಿರುವವರು ಮತ್ತು ವಿವಾಹದ ಖರ್ಚುವೆಚ್ಚಗಳನ್ನು ಭರಿಸುವ ಸಾಮರ್ಥ್ಯವಿರುವವರು ವಿವಾಹವಾಗಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೋತ್ಸಾಹಿಸಿದ್ದಾರೆ. ಏಕೆಂದರೆ, ನಿಷಿದ್ಧವಾದುದನ್ನು ನೋಡದಂತೆ ಅದು ಕಣ್ಣುಗಳನ್ನು ಸಂರಕ್ಷಿಸುತ್ತದೆ, ಗುಹ್ಯಾಂಗವನ್ನು ಅತ್ಯಂತ ಶುದ್ಧವಾಗಿಡುತ್ತದೆ ಮತ್ತು ಅಶ್ಲೀಲ ಕೃತ್ಯಗಳಲ್ಲಿ ತೊಡಗದಂತೆ ತಡೆಯುತ್ತದೆ. ಸಂಭೋಗದ ಸಾಮರ್ಥ್ಯವಿದ್ದೂ, ವಿವಾಹದ ಖರ್ಚನ್ನು ಭರಿಸಲು ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಗುಹ್ಯಾಂಗದ ಬಯಕೆಗೆ ಮತ್ತು ವೀರ್ಯದಿಂದ ಉಂಟಾಗುವ ಕೆಡುಕಿಗೆ ಕಡಿವಾಣ ಹಾಕುತ್ತದೆ.