عن أبي هريرة رضي الله عنه قال: سمعت رسول الله صلى الله عليه وسلم يقول:
«حَقُّ الْمُسْلِمِ عَلَى الْمُسْلِمِ خَمْسٌ: رَدُّ السَّلَامِ، وَعِيَادَةُ الْمَرِيضِ، وَاتِّبَاعُ الْجَنَائِزِ، وَإِجَابَةُ الدَّعْوَةِ، وَتَشْمِيتُ الْعَاطِسِ».
[صحيح] - [متفق عليه] - [صحيح البخاري: 1240]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
“ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.”
[صحيح] - [متفق عليه] - [صحيح البخاري - 1240]
ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲಿರುವ ಕೆಲವು ಹಕ್ಕುಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ವಿವರಿಸುತ್ತಾರೆ. ಮೊದಲನೆಯ ಹಕ್ಕು, ಮುಸಲ್ಮಾನನು ಸಲಾಂ ಹೇಳಿದರೆ ಅದಕ್ಕೆ ಉತ್ತರಿಸುವುದು.
ಎರಡನೆಯ ಹಕ್ಕು: ರೋಗಿಯಾದರೆ ಅವನನ್ನು ಭೇಟಿ ಮಾಡುವುದು.
ಮೂರನೆಯ ಹಕ್ಕು: ಅವನ ಮೃತದೇಹವನ್ನು ಮನೆಯಿಂದ ನಮಾಝ್ ಮಾಡುವ ಸ್ಥಳದವರೆಗೆ, ಅಲ್ಲಿಂದ ದಫನ ಮಾಡುವ ಸ್ಥಳದವರೆಗೆ ದಫನ ಕಾರ್ಯ ಮುಗಿಯುವ ತನಕ ಹಿಂಬಾಲಿಸುವುದು.
ನಾಲ್ಕನೆಯ ಹಕ್ಕು: ಅವನು ಮದುವೆಯ ಔತಣ ಅಥವಾ ಇತರ ಸಮಾರಂಭಗಳಿಗೆ ಆಮಂತ್ರಿಸಿದರೆ ಆಮಂತ್ರಣವನ್ನು ಸ್ವೀಕರಿಸುವುದು.
ಐದನೆಯ ಹಕ್ಕು: ಸೀನಿದ ನಂತರ ಅವನು “ಅಲ್-ಹಮ್ದುಲಿಲ್ಲಾಹ್” ಎಂದು ಹೇಳಿದರೆ “ಯರ್ಹಮುಕಲ್ಲಾಹ್” ಎಂದು ಹೇಳುವುದು, ನಂತರ ಅವನು ಅದಕ್ಕೆ ಉತ್ತರವಾಗಿ “ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್” ಎಂದು ಹೇಳುವುದು.