+ -

عَنْ أَبِي سَعِيدٍ الْخُدْرِيِّ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّ الدُّنْيَا حُلْوَةٌ خَضِرَةٌ، وَإِنَّ اللهَ مُسْتَخْلِفُكُمْ فِيهَا، فَيَنْظُرُ كَيْفَ تَعْمَلُونَ، فَاتَّقُوا الدُّنْيَا وَاتَّقُوا النِّسَاءَ، فَإِنَّ أَوَّلَ فِتْنَةِ بَنِي إِسْرَائِيلَ كَانَتْ فِي النِّسَاءِ».

[صحيح] - [رواه مسلم] - [صحيح مسلم: 2742]
المزيــد ...

ಅಬೂ ಸಈದ್ ಖುದ್ರಿ (ರ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಶ್ಚಯವಾಗಿಯೂ ಇಹಲೋಕವು ಮಧುರವಾಗಿದೆ ಮತ್ತು ಹಸಿರಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ಅದರಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿ, ನೀವು ಹೇಗೆ ವರ್ತಿಸುತ್ತೀರಿ ಎಂದು ನೋಡುತ್ತಾನೆ. ಆದ್ದರಿಂದ ನೀವು ಇಹಲೋಕವನ್ನು ಭಯಪಡಿರಿ ಮತ್ತು ಸ್ತ್ರೀಯರನ್ನು ಭಯಪಡಿರಿ. ಏಕೆಂದರೆ, ಬನೂ ಇಸ್ರಾಈಲರ ಮೊತ್ತಮೊದಲ ಪರೀಕ್ಷೆಯು ಸ್ತ್ರೀಯರ ಮೂಲಕವಾಗಿತ್ತು."

[صحيح] - [رواه مسلم] - [صحيح مسلم - 2742]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಹಲೋಕವು ;ರುಚಿಯಲ್ಲಿ ಮಧುರವಾಗಿದೆ ಮತ್ತು ರೂಪದಲ್ಲಿ ಹಸಿರಾಗಿದೆ. ಮನುಷ್ಯನು ಅದರಿಂದ ವಂಚಿತನಾಗಿ, ಅದರಲ್ಲೇ ತಲ್ಲೀನನಾಗಿ, ಅದನ್ನೇ ತನ್ನ ಮುಖ್ಯ ಗುರಿಯಾಗಿ ಮಾಡಿಕೊಳ್ಳುವ ಸಾಧ್ಯತೆಯಿದೆ. ನಿಶ್ಚಯವಾಗಿಯೂ, ಅಲ್ಲಾಹು ನಮ್ಮನ್ನು ಈ ಭೂಮಿಯಲ್ಲಿ ಒಬ್ಬರ ನಂತರ ಒಬ್ಬರು ಬರುವಂತೆ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದಾನೆ—ನಾವು ಹೇಗೆ ವರ್ತಿಸುತ್ತೇವೆ, ನಾವು ಅವನ ಆಜ್ಞೆಗಳನ್ನು ಪಾಲಿಸುತ್ತೇವೆಯೋ ಅಥವಾ ಪಾಲಿಸುವುದಿಲ್ಲವೋ ಎಂದು ಪರೀಕ್ಷಿಸಲು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: ಇಹಲೋಕದ ಆನಂದ ಮತ್ತು ಅಲಂಕಾರಗಳು ನಿಮ್ಮನ್ನು ವಂಚಿಸದಂತೆ ಎಚ್ಚರದಿಂದಿರಿ. ಹಾಗೇನಾದರೂ ಆದರೆ ಅದು ನಿಮ್ಮನ್ನು ಅಲ್ಲಾಹು ಆಜ್ಞಾಪಿಸಿದ್ದನ್ನು ತೊರೆಯುವಂತೆ ಮತ್ತು ಅವನು ವಿರೋಧಿಸಿದ್ದನ್ನು ಮಾಡುವಂತೆ ಪ್ರೋತ್ಸಾಹಿಸಬಹುದು. ಇಹಲೋಕದ ಪರೀಕ್ಷೆಗಳಲ್ಲಿ ಸ್ತ್ರೀಯರ ಮೂಲಕ ಉಂಟಾಗುವ ಪರೀಕ್ಷೆಯ ಬಗ್ಗೆ ನೀವು ಅತ್ಯಧಿಕ ಎಚ್ಚರವಹಿಸಬೇಕು. ಏಕೆಂದರೆ, ಬನೂ ಇಸ್ರಾಈಲರಿಗೆ ಉಂಟಾದ ಮೊತ್ತಮೊದಲ ಪರೀಕ್ಷೆ ಸ್ತ್ರೀಯರ ಮೂಲಕವಾಗಿತ್ತು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية الموري المالاجاشية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಅಲ್ಲಾಹನನ್ನು ಸದಾ ಭಯಪಡುತ್ತಾ ಇರಬೇಕು ಮತ್ತು ಇಹಲೋಕದ ರೂಪ ಮತ್ತು ಅಲಂಕಾರಗಳನ್ನು ಸವಿಯುವುದರಲ್ಲಿ ತಲ್ಲೀನರಾಗಬಾರದೆಂದು ಒತ್ತಿ ಹೇಳಲಾಗಿದೆ.
  2. ಮಹಿಳೆಯರನ್ನು ನೋಡುವುದು, ಅವರು ಪರಪುರುಷರೊಡನೆ ಮುಕ್ತವಾಗಿ ಬೆರೆಯುವುದನ್ನು ಕಂಡೂ ಅಸಡ್ಡೆ ತೋರುವುದು ಮುಂತಾದ ಮಹಿಳೆಯರಿಂದ ಉಂಟಾಗುವ ಪರೀಕ್ಷೆಗಳ ಬಗ್ಗೆ ಎಚ್ಚರಿಸಲಾಗಿದೆ.
  3. ಮಹಿಳೆಯರ ಮೂಲಕ ಉಂಟಾಗುವ ಪರೀಕ್ಷೆಯು ಇಹಲೋಕದ ಪರೀಕ್ಷೆಗಳಲ್ಲಿ ಅತಿದೊಡ್ಡದಾಗಿದೆ.
  4. ಪೂರ್ವ ಸಮುದಾಯಗಳಿಂದ ಪಾಠ ಕಲಿಯಬೇಕಾದ ಮಹತ್ವವನ್ನು ತಿಳಿಸಲಾಗಿದೆ. ಏಕೆಂದರೆ, ಬನೂ ಇಸ್ರಾಈಲರಿಗೆ ಸಂಭವಿಸಿದ್ದು ಇತರರಿಗೂ ಸಂಭವಿಸಬಹುದಾಗಿದೆ.
  5. ಸ್ತ್ರೀಯರ ಪರೀಕ್ಷೆಗಳೆಂದರೆ, ಅವರು ಪತ್ನಿಯಾಗಿದ್ದರೆ ಗಂಡನಿಗೆ ಅವನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಖರ್ಚು ಮಾಡಲು ಹೇಳುವ ಮೂಲಕ ಅವನು ಧಾರ್ಮಿಕ ವಿಷಯಗಳಿಗೆ ಗಮನಕೊಡದೆ ಇಹಲೋಕದ ಬಗ್ಗೆಯೇ ಆಸಕ್ತನಾಗುವಂತೆ ಮಾಡುವುದು. ಅವರು ಅನ್ಯಸ್ತ್ರೀಯಾಗಿದ್ದರೆ, ಪುರುಷರನ್ನು ಬಲೆಗೆ ಹಾಕಿ ಅವರೊಂದಿಗೆ ಹೊರಡುವ ಮತ್ತು ಬೆರೆಯುವ ಮೂಲಕ ಅವರನ್ನು ಸತ್ಯದಿಂದ ಹಿಮ್ಮೆಟ್ಟಿಸಬಹುದು. ವಿಶೇಷವಾಗಿ, ಅವರು ಹಿಜಾಬ್ ಧರಿಸದ ಮತ್ತು ಸೌಂದರ್ಯ ಪ್ರದರ್ಶನ ಮಾಡುವ ಮಹಿಳೆಯರಾಗಿದ್ದರೆ. ಇದು ಅವರನ್ನು ವ್ಯಭಿಚಾರದ ಹಲವು ಹಂತಗಳಲ್ಲಿ ಬೀಳುವಂತೆ ಮಾಡಬಹುದು. ಆದ್ದರಿಂದ ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿ ರಕ್ಷೆಯನ್ನು ಬೇಡಬೇಕು ಮತ್ತು ಸ್ತ್ರೀಯರ ಪರೀಕ್ಷೆಗಳಿಂದ ಕಾಪಾಡುವಂತೆ ಅವನಲ್ಲಿ ಪ್ರಾರ್ಥಿಸಬೇಕು.
ಇನ್ನಷ್ಟು