عَن ابنِ عباسٍ رضي الله عنهما أنَّ رسولَ اللهِ صلي الله عليه وسلم قال:
«لَو يُعطَى النّاسُ بدَعواهُم لادَّعَى رِجالٌ أموالَ قَومٍ ودِماءَهُم، ولَكِنَّ البَيِّنَةَ على المُدَّعِى، واليَمينَ على مَن أنكَرَ».
المزيد
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜನರ ಹಕ್ಕೊತ್ತಾಯಗಳಿಗೆ ಅನುಗುಣವಾಗಿ ಅವರಿಗೆ ನೀಡಲಾಗುತ್ತಿದ್ದರೆ, ಕೆಲವು ಪುರುಷರು ಇತರರ ಸಂಪತ್ತು ಮತ್ತು ರಕ್ತಗಳಿಗಾಗಿ ಹಕ್ಕೊತ್ತಾಯ ಮಾಡುತ್ತಿದ್ದರು. ಆದರೆ, ಹಕ್ಕೊತ್ತಾಯ ಮಾಡುವವನು (ಫಿರ್ಯಾದಿ) ಅದಕ್ಕೆ ಪುರಾವೆ ಒದಗಿಸಬೇಕು ಮತ್ತು ಅದನ್ನು ನಿರಾಕರಿಸುವವನು (ಪ್ರತಿವಾದಿ) ಪ್ರಮಾಣ ಮಾಡಬೇಕು."