عَنْ حُذَيْفَةَ رضي الله عنه قَالَ:
كُنْتُ مَعَ النَّبِيِّ صَلَّى اللهُ عَلَيْهِ وَسَلَّمَ فَانْتَهَى إِلَى سُبَاطَةِ قَوْمٍ، فَبَالَ قَائِمًا، فَتَنَحَّيْتُ فَقَالَ: «ادْنُهْ» فَدَنَوْتُ حَتَّى قُمْتُ عِنْدَ عَقِبَيْهِ فَتَوَضَّأَ فَمَسَحَ عَلَى خُفَّيْهِ.
[صحيح] - [متفق عليه] - [صحيح مسلم: 273]
المزيــد ...
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ, ಅವರು ಅಲ್ಲಿನ ಜನಸಮೂಹದ ತಿಪ್ಪೆಯ ಬಳಿಗೆ ಸಾಗಿ, ಅಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು. ನಾನು ಅವರಿಂದ ದೂರ ಸರಿದೆ. ಅವರು ಹೇಳಿದರು: "ಹತ್ತಿರ ಬಾ." ನಾನು ಅವರ ಹಿಂಭಾಗದಲ್ಲಿ ಅವರಿಗೆ ಹತ್ತಿರವಾಗಿ ನಿಂತೆ. ನಂತರ ಅವರು ವುದೂ ನಿರ್ವಹಿಸಿದರು ಮತ್ತು ಪಾದರಕ್ಷೆಗಳ ಮೇಲೆ ಸವರಿದರು.
[صحيح] - [متفق عليه] - [صحيح مسلم - 273]
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಒಮ್ಮೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂತ್ರ ವಿಸರ್ಜನೆ ಮಾಡಲು ಒಂದು ಜನಸಮೂಹದ ತಿಪ್ಪೆಯ ಬಳಿಗೆ ಹೋದರು. ಅದು ಮನೆಗಳನ್ನು ಗುಡಿಸಿ ತೆಗೆದ ಕಸ-ಕಡ್ಡಿಗಳನ್ನು ಮತ್ತು ಧೂಳಿಯನ್ನು ಎಸೆಯುವ ಸ್ಥಳವಾಗಿದೆ. ಅಲ್ಲಿ ಅವರು ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು. ಹೆಚ್ಚಿನ ಸಂದರ್ಭಗಳಲ್ಲಿ ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುವುದು ಅವರ ಅಭ್ಯಾಸವಾಗಿತ್ತು.
ಆಗ ಹುದೈಫ ಅವರಿಂದ ದೂರ ಸರಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹತ್ತಿರ ಬಾ. ಹುದೈಫ ಅವರ ಪಾದಗಳ ಹಿಂಬದಿಯಲ್ಲಿ ಅವರಿಗೆ ಹತ್ತಿರವಾಗಿ ನಿಂತರು. ಇದು ಆ ಪರಿಸ್ಥಿತಿಯಲ್ಲಿ ಅವರನ್ನು ಯಾರೂ ನೋಡದಿರಲಿ ಎಂದು ಅವರನ್ನು ಪರದೆಯಂತೆ ಮರೆಮಾಚುವುದಕ್ಕಾಗಿತ್ತು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದರು. ಕಾಲುಗಳನ್ನು ತೊಳೆಯುವ ಸಂದರ್ಭ ಬಂದಾಗ, ಅವರು ತಮ್ಮ ಖುಫ್ಫ್‌ಗಳನ್ನು—ಇವು ಪುರುಷರು ತಮ್ಮ ಕಾಲಿಗೆ ಧರಿಸುವ ತೆಳುವಾದ ಚರ್ಮ ಮುಂತಾದವುಗಳಿಂದ ತಯಾರಿಸಲಾದ ಪಾದರಕ್ಷೆಗಳಾಗಿದ್ದು ಇವು ಅವರ ಹರಡುಗಂಟುಗಳು ಸೇರಿದಂತೆ ಪಾದಗಳನ್ನು ಸಂಪೂರ್ಣವಾಗಿ ಮುಚ್ಚುತ್ತದೆ—ಕಳಚದೆ ಅವುಗಳ ಮೇಲೆ ಸವರಿದರು.