+ -

عَنْ أَنَسٍ رضي الله عنه قَالَ:
كَانَ أَكْثَرُ دُعَاءِ النَّبِيِّ صَلَّى اللهُ عَلَيْهِ وَسَلَّمَ: «اللَّهُمَّ رَبَّنَا آتِنَا فِي الدُّنْيَا حَسَنَةً، وَفِي الآخِرَةِ حَسَنَةً، وَقِنَا عَذَابَ النَّارِ».

[صحيح] - [متفق عليه] - [صحيح البخاري: 6389]
المزيــد ...

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ ಹೀಗಿತ್ತು: "ಓ ಅಲ್ಲಾಹ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು."

[صحيح] - [متفق عليه] - [صحيح البخاري - 6389]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಸಮಗ್ರವಾದ ಅರ್ಥವನ್ನು ಹೊಂದಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದ್ದರು. ಅವುಗಳಲ್ಲೊಂದು ಹೀಗಿದೆ: "ಓ ಅಲ್ಲಾಹ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು." ಈ ಪ್ರಾರ್ಥನೆಯು ಇಹಲೋಕದ ಒಳಿತುಗಳನ್ನು—ಅಂದರೆ ಸಮೃದ್ಧಪೂರ್ಣ, ವಿಶಾಲ ಮತ್ತು ಧರ್ಮಸಮ್ಮತವಾದ ಉಪಜೀವನ, ಧರ್ಮನಿಷ್ಠ ಪತ್ನಿ, ಕಣ್ತಂಪಿಗೆ ಕಾರಣವಾಗುವ ಮಕ್ಕಳು, ನೆಮ್ಮದಿಯ ಜೀವನ, ಪ್ರಯೋಜನಕಾರಿ ಜ್ಞಾನ, ಸತ್ಕರ್ಮಗಳು ಮುಂತಾದ ನಮ್ಮ ನೆಚ್ಚಿನ ಮತ್ತು ಧರ್ಮಸಮ್ಮತ ಬೇಡಿಕೆಗಳನ್ನು ಒಳಗೊಂಡಿದೆ. ಹಾಗೆಯೇ ಇದು ಪರಲೋಕದ ಒಳಿತುಗಳನ್ನು—ಅಂದರೆ ಸಮಾಧಿಯ ಶಿಕ್ಷೆ, ಪರಲೋಕದ ಶಿಕ್ಷೆ ಮತ್ತು ನರಕದ ಶಿಕ್ಷೆಯಿಂದ ಮುಕ್ತಿ ಪಡೆಯುವುದು, ಅಲ್ಲಾಹನ ಸಂಪ್ರೀತಿಗೆ ಪಾತ್ರವಾಗುವುದು, ಶಾಶ್ವತ ಸುಖಗಳನ್ನು ಪಡೆಯುವುದು ಮತ್ತು ಕರುಣಾಮಯಿ ಪರಿಪಾಲಕನ (ಅಲ್ಲಾಹನ) ಸಾಮೀಪ್ಯವನ್ನು ಗಳಿಸುವುದನ್ನು ಒಳಗೊಂಡಿದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو الولوف الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರಂತೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಗ್ರ ಅರ್ಥವನ್ನು ಹೊಂದಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸುವುದು ಅಪೇಕ್ಷಣೀಯವಾಗಿದೆ.
  2. ಮನುಷ್ಯನು ಪ್ರಾರ್ಥನೆಯಲ್ಲಿ ಇಹಲೋಕ ಮತ್ತು ಪರಲೋಕದ ಒಳಿತುಗಳನ್ನು ಸೇರಿಸುವುದು ಪ್ರಾರ್ಥನೆಯ ಸಂಪೂರ್ಣ ರೂಪವಾಗಿದೆ.
ಇನ್ನಷ್ಟು