+ -

عن أبي هريرة رضي الله عنه أَن النبيَّ صَلّى اللهُ عَلَيْهِ وسَلَّم قَالَ:
«الرَّجُلُ عَلَى دِينِ خَلِيلِهِ، فَلْيَنْظُر أَحَدُكُم مَنْ يُخَالِل».

[حسن] - [رواه أبو داود والترمذي وأحمد] - [سنن أبي داود: 4833]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮನುಷ್ಯನು ಅವನ ಆಪ್ತ ಸ್ನೇಹಿತನ ಧರ್ಮದಲ್ಲಿರುತ್ತಾನೆ. ಆದ್ದರಿಂದ ನಿಮ್ಮಲ್ಲೊಬ್ಬನು ತಾನು ಯಾರೊಡನೆ ಸ್ನೇಹ ಬೆಳೆಸುತ್ತಿದ್ದೇನೆಂದು ನೋಡಿಕೊಳ್ಳಲಿ."

[حسن] - [رواه أبو داود والترمذي وأحمد] - [سنن أبي داود - 4833]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮನುಷ್ಯನು ತನ್ನ ನಡವಳಿಕೆ ಮತ್ತು ವರ್ತನೆಗಳಲ್ಲಿ ತನ್ನ ಆಪ್ತ ಸ್ನೇಹಿತನನ್ನು ಮತ್ತು ಗೆಳೆಯನನ್ನು ಅನುಕರಿಸುತ್ತಾನೆ. ಗೆಳೆತನವು ನಡವಳಿಕೆ, ವರ್ತನೆ ಮತ್ತು ವ್ಯವಹಾರಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದಲೇ, ಉತ್ತಮ ಸ್ನೇಹಿತನನ್ನು ಆರಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಏಕೆಂದರೆ, ಉತ್ತಮ ಸ್ನೇಹಿತನು ಅವನನ್ನು ಸತ್ಯವಿಶ್ವಾಸ, ಸನ್ಮಾರ್ಗ ಮತ್ತು ಒಳಿತಿಗೆ ಮುನ್ನಡೆಸುತ್ತಾನೆ ಮತ್ತು ಅವನಿಗೆ ಸಹಾಯ ಮಾಡುತ್ತಾನೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الصربية الصومالية الرومانية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಸಜ್ಜನರೊಡನೆ ಸಹವಾಸ ಮಾಡಲು ಮತ್ತು ಅವರನ್ನೇ ಆಯ್ಕೆ ಮಾಡಲು ಆದೇಶಿಸಲಾಗಿದೆ. ದುಷ್ಟ ಜನರ ಸಹವಾಸವನ್ನು ನಿಷೇಧಿಸಲಾಗಿದೆ.
  2. ಇಲ್ಲಿ ರಕ್ತ ಸಂಬಂಧಿಗಳನ್ನು ಬಿಟ್ಟು ಸ್ನೇಹಿತರ ಬಗ್ಗೆ ವಿಶೇಷವಾಗಿ ತಿಳಿಸಲಾಗಿದೆ. ಏಕೆಂದರೆ, ಸ್ನೇಹಿತನನ್ನು ಆಯ್ಕೆ ಮಾಡುವುದು ನೀವೇ. ನಿಮ್ಮ ಸಹೋದರ ಮತ್ತು ರಕ್ತ ಸಂಬಂಧಿಯ ಆಯ್ಕೆಯು ನಿಮ್ಮ ನಿಯಂತ್ರಣದಲ್ಲಿಲ್ಲ.
  3. ಸ್ನೇಹಿತರನ್ನು ಸ್ವೀಕರಿಸುವುದು ಸರಿಯಾಗಿ ಆಲೋಚನೆ ಮಾಡಿದ ನಂತರವಾಗಿರಬೇಕಾದುದು ಅತ್ಯಾವಶ್ಯಕ.
  4. ಮನುಷ್ಯನು ಸತ್ಯವಿಶ್ವಾಸಿಗಳ ಸಹವಾಸದಿಂದ ತನ್ನ ಧರ್ಮವನ್ನು ಪ್ರಬಲಗೊಳಿಸುತ್ತಾನೆ ಮತ್ತು ದುಷ್ಟರ ಸಹವಾಸದಿಂದ ಅದನ್ನು ದುರ್ಬಲಗೊಳಿಸುತ್ತಾನೆ.
ಇನ್ನಷ್ಟು