ಹದೀಸ್‌ಗಳ ಪಟ್ಟಿ

ಯಾರು ಇತರರಿಗೆ ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಇತರರಿಗೆ ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ
عربي الإنجليزية الأوردية
ಮನುಷ್ಯನು ಅವನ ಆಪ್ತ ಸ್ನೇಹಿತನ ಧರ್ಮದಲ್ಲಿರುತ್ತಾನೆ. ಆದ್ದರಿಂದ ನಿಮ್ಮಲ್ಲೊಬ್ಬನು ತಾನು ಯಾರೊಡನೆ ಸ್ನೇಹ ಬೆಳೆಸುತ್ತಿದ್ದೇನೆಂದು ನೋಡಿಕೊಳ್ಳಲಿ
عربي الإنجليزية الأوردية
ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಆರು ಹಕ್ಕುಗಳಿವೆ." ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು ಎಂದು ಕೇಳಲಾಯಿತು. ಅವರು ಉತ್ತರಿಸಿದರು: "ನೀನು ಅವನನ್ನು ಭೇಟಿಯಾದರೆ, ಅವನಿಗೆ ಸಲಾಂ ಹೇಳುವುದು; ಅವನು ನಿನ್ನನ್ನು ಆಹ್ವಾನಿಸಿದರೆ, ಅವನ ಆಹ್ವಾನವನ್ನು ಸ್ವೀಕರಿಸುವುದು; ಅವನು ನಿನ್ನಲ್ಲಿ ಸಲಹೆ ಕೇಳಿದರೆ, ಅವನಿಗೆ ಸಲಹೆ ನೀಡುವುದು; ಅವನು ಸೀನಿದ ನಂತರ ಅಲ್ಲಾಹನನ್ನು ಸ್ತುತಿಸಿದರೆ, ಅವನಿಗೆ ತಸ್ಮೀತ್ ಮಾಡುವುದು; ಅವನು ಅನಾರೋಗ್ಯಕ್ಕೆ ಒಳಗಾದಾಗ, ಅವನನ್ನು ಸಂದರ್ಶಿಸುವುದು; ಮತ್ತು ಅವನು ನಿಧನನಾದರೆ ಅವನ ಮೃತದೇಹವನ್ನು ಹಿಂಬಾಲಿಸುವುದು
عربي الإنجليزية الأوردية