عَنْ أَنَسٍ رَضِيَ اللَّهُ عَنْهُ:
أَنَّ رَجُلًا سَأَلَ النَّبِيَّ صَلَّى اللهُ عَلَيْهِ وَسَلَّمَ عَنِ السَّاعَةِ، فَقَالَ: مَتَى السَّاعَةُ؟ قَالَ: «وَمَاذَا أَعْدَدْتَ لَهَا». قَالَ: لاَ شَيْءَ، إِلَّا أَنِّي أُحِبُّ اللَّهَ وَرَسُولَهُ صَلَّى اللهُ عَلَيْهِ وَسَلَّمَ، فَقَالَ: «أَنْتَ مَعَ مَنْ أَحْبَبْتَ». قَالَ أَنَسٌ: فَمَا فَرِحْنَا بِشَيْءٍ، فَرِحْنَا بِقَوْلِ النَّبِيِّ صَلَّى اللهُ عَلَيْهِ وَسَلَّمَ: «أَنْتَ مَعَ مَنْ أَحْبَبْتَ» قَالَ أَنَسٌ: فَأَنَا أُحِبُّ النَّبِيَّ صَلَّى اللهُ عَلَيْهِ وَسَلَّمَ وَأَبَا بَكْرٍ، وَعُمَرَ، وَأَرْجُو أَنْ أَكُونَ مَعَهُمْ بِحُبِّي إِيَّاهُمْ، وَإِنْ لَمْ أَعْمَلْ بِمِثْلِ أَعْمَالِهِمْ.
[صحيح] - [متفق عليه] - [صحيح البخاري: 3688]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯದ ಬಗ್ಗೆ ವಿಚಾರಿಸುತ್ತಾ ಕೇಳಿದರು: "ಅಂತ್ಯಸಮಯ ಯಾವಾಗ?" ಅವರು ಕೇಳಿದರು: "ನೀನು ಅದಕ್ಕಾಗಿ ಏನನ್ನು ಸಿದ್ಧಪಡಿಸಿದ್ದೀಯಾ?" ಆ ವ್ಯಕ್ತಿ ಉತ್ತರಿಸಿದರು: "ಏನೂ ಇಲ್ಲ. ಆದರೆ ನಾನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುತ್ತೇನೆ." ಆಗ ಅವರು (ಪ್ರವಾದಿ) ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಅವರೊಂದಿಗೆ ಇರುವೆ." ಅನಸ್ ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಅವರೊಂದಿಗೆ ಇರುವೆ" ಎಂಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತನ್ನು ಕೇಳಿ ನಮಗೆ ಎಷ್ಟು ಸಂತೋಷವಾಯಿತೆಂದರೆ, ಅಷ್ಟು ಸಂತೋಷ ನಮಗೆ ಇನ್ನಾವುದರಿಂದಲೂ ಉಂಟಾಗಿರಲಿಲ್ಲ." ಅನಸ್ ಹೇಳಿದರು: "ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಅಬೂಬಕರ್‌ರನ್ನು ಮತ್ತು ಉಮರ್‌ರನ್ನು ಪ್ರೀತಿಸುತ್ತೇನೆ. ಅವರು ಮಾಡಿದಂತಹ ಕರ್ಮಗಳನ್ನು ನಾನು ಮಾಡಿರದಿದ್ದರೂ ಸಹ, ನನಗೆ ಅವರಲ್ಲಿರುವ ಪ್ರೀತಿಯಿಂದಾಗಿ ನಾನು ಅವರೊಂದಿಗೆ ಇರಲು ಬಯಸುತ್ತೇನೆ."
[صحيح] - [متفق عليه] - [صحيح البخاري - 3688]
ಮರುಭೂಮಿಯಲ್ಲಿ ವಾಸಿಸುವ ಒಬ್ಬ ಅಲೆಮಾರಿ ಅರಬ್ಬನು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತ್ಯಸಮಯವು ಸಂಭವಿಸುವ ಸಮಯದ ಬಗ್ಗೆ ಕೇಳಿದರು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನೀನು ಅದಕ್ಕಾಗಿ ಏನೆಲ್ಲಾ ಸತ್ಕರ್ಮಗಳನ್ನು ಸಿದ್ಧಪಡಿಸಿದ್ದೀಯಾ?"
ಪ್ರಶ್ನೆ ಕೇಳಿದ ವ್ಯಕ್ತಿ ಉತ್ತರಿಸಿದರು: "ನಾನು ಅದಕ್ಕಾಗಿ ದೊಡ್ಡ ಕರ್ಮಗಳನ್ನು ಮಾಡಿಲ್ಲ. ಆದರೆ ನಾನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುತ್ತೇನೆ." ಆ ವ್ಯಕ್ತಿ ಅದರ ಹೊರತು ಬೇರೆ ಯಾವುದೇ ಆಂತರಿಕ, ದೈಹಿಕ ಅಥವಾ ಅರ್ಥಿಕ ಆರಾಧನೆಗಳ ಬಗ್ಗೆ ತಿಳಿಸಲಿಲ್ಲ. ಏಕೆಂದರೆ, ಅವೆಲ್ಲವೂ ಆ ಪ್ರೀತಿಯ ಪರಿಣಾಮವಾಗಿ ಉಂಟಾಗುವ ಅದರ ಶಾಖೆಗಳಾಗಿವೆ. ಏಕೆಂದರೆ, ಪ್ರಾಮಾಣಿಕ ಪ್ರೀತಿಯು ಸತ್ಕರ್ಮಗಳನ್ನು ಮಾಡಲು ಪರಿಶ್ರಮಿಸುವಂತೆ ಪ್ರೇರೇಪಿಸುತ್ತದೆ.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ವ್ಯಕ್ತಿಯೊಡನೆ ಹೇಳಿದರು: "ನೀನು ಯಾರನ್ನು ಪ್ರೀತಿಸುತ್ತೀಯೋ ಸ್ವರ್ಗದಲ್ಲಿ ಅವರೊಂದಿಗೆ ಇರುವೆ."
ಈ ಸುವಾರ್ತೆ ಕೇಳಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಿಗೆ ಅತಿಯಾದ ಸಂತೋಷವಾಯಿತು.
ನಂತರ, ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಅಬೂಬಕರ್‌ರನ್ನು ಮತ್ತು ಉಮರ್‌ರನ್ನು ಪ್ರೀತಿಸುತ್ತಾರೆ ಮತ್ತು ಅವರೊಡನೆ ಇರಲು ಬಯಸುತ್ತಾರೆ. ಇವರು ಮಾಡಿದ ಕರ್ಮಗಳು ಅವರ ಕರ್ಮಗಳಂತೆ ಅಗಾಧವಾಗಿರದಿದ್ದರೂ ಸಹ.