عَنْ أَبِي مُوسَى رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّ اللهَ عَزَّ وَجَلَّ يَبْسُطُ يَدَهُ بِاللَّيْلِ لِيَتُوبَ مُسِيءُ النَّهَارِ، وَيَبْسُطُ يَدَهُ بِالنَّهَارِ لِيَتُوبَ مُسِيءُ اللَّيْلِ، حَتَّى تَطْلُعَ الشَّمْسُ مِنْ مَغْرِبِهَا».
[صحيح] - [رواه مسلم] - [صحيح مسلم: 2759]
المزيــد ...
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ರಾತ್ರಿಯಲ್ಲಿ ಕೈ ಚಾಚುತ್ತಾನೆ. ರಾತ್ರಿಯಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ಹಗಲಿನಲ್ಲಿ ಕೈ ಚಾಚುತ್ತಾನೆ. ಎಲ್ಲಿಯವರೆಗೆಂದರೆ, ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ."
[صحيح] - [رواه مسلم] - [صحيح مسلم - 2759]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ದಾಸನು ಹಗಲಿನಲ್ಲಿ ಪಾಪ ಮಾಡಿ ರಾತ್ರಿ ಪಶ್ಚಾತ್ತಾಪಪಟ್ಟರೆ ಅಲ್ಲಾಹು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅವನು ರಾತ್ರಿಯಲ್ಲಿ ಪಾಪ ಮಾಡಿ ಹಗಲು ಪಶ್ಚಾತ್ತಾಪಪಟ್ಟರೆ ಅಲ್ಲಾಹು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹು ಪಶ್ಚಾತ್ತಾಪದ ಬಗ್ಗೆ ಹರ್ಷ ವ್ಯಕ್ತಪಡಿಸುವ ಮತ್ತು ಅದನ್ನು ಸ್ವೀಕರಿಸುವ ರೂಪದಲ್ಲಿ ತನ್ನ ಕೈಗಳನ್ನು ಚಾಚುತ್ತಾನೆ. ಭೂಲೋಕವು ಅಂತ್ಯವಾಗಿದೆ ಎಂಬ ಘೋಷಣೆಯ ರೂಪದಲ್ಲಿ ಸೂರ್ಯ ಪಶ್ಚಿಮದಿಂದ ಉದಯವಾಗುವ ತನಕ ಪಶ್ಚಾತ್ತಾಪದ ಬಾಗಿಲು ತೆರೆದಿರುತ್ತದೆ. ಸೂರ್ಯ ಪಶ್ಚಿಮದಿಂದ ಉದಯವಾಗಿ ಬಿಟ್ಟರೆ ಪಶ್ಚಾತ್ತಾಪದ ಬಾಗಿಲು ಮುಚ್ಚುತ್ತದೆ.