عَنْ عَبْدِ اللَّهِ بِن مَسْعُودٍ رضي الله عنه قَالَ:
سَأَلْتُ النَّبِيَّ صَلَّى اللهُ عَلَيْهِ وَسَلَّمَ: أَيُّ العَمَلِ أَحَبُّ إِلَى اللَّهِ؟ قَالَ: «الصَّلاَةُ عَلَى وَقْتِهَا»، قَالَ: ثُمَّ أَيٌّ؟ قَالَ: «ثُمَّ بِرُّ الوَالِدَيْنِ» قَالَ: ثُمَّ أَيٌّ؟ قَالَ: «الجِهَادُ فِي سَبِيلِ اللَّهِ» قَالَ: حَدَّثَنِي بِهِنَّ، وَلَوِ اسْتَزَدْتُهُ لَزَادَنِي.
[صحيح] - [متفق عليه] - [صحيح البخاري: 527]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಪ್ರವಾದಿ(ಸ) ರೊಂದಿಗೆ ಕೇಳಿದೆ: “ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು.” ಇಬ್ನ್ ಮಸ್‌ಊದ್ ಹೇಳುತ್ತಾರೆ: "ಇವೆಲ್ಲವೂ ಅವರು ತಿಳಿಸಿದ್ದಾಗಿದೆ. ಒಂದು ವೇಳೆ ನಾನು ಇನ್ನೂ ಕೇಳುತ್ತಾ ಹೋದರೆ ಅವರು ಇನ್ನೂ ಉತ್ತರಿಸುತ್ತಿದ್ದರು."
[صحيح] - [متفق عليه] - [صحيح البخاري - 527]
ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) “ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಎಂದು ಕೇಳಲಾಯಿತು. ಆಗ ಅವರು ಉತ್ತರಿಸಿದರು: "ಅಲ್ಲಾಹು ನಿಗದಿಗೊಳಿಸಿದ ಸಮಯದಲ್ಲಿ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸುವುದು." ನಂತರ ತಂದೆ-ತಾಯಿಗೆ ಒಳಿತು ಮಾಡುವುದು. ಅಂದರೆ, ಅವರೊಡನೆ ಉತ್ತಮವಾಗಿ ವರ್ತಿಸುವುದು, ಅವರ ಅಗತ್ಯಗಳನ್ನು ಪೂರೈಸುವುದು ಮತ್ತು ಅವರಿಗೆ ಅವಿಧೇಯತೆ ತೋರದಿರುವುದು. ನಂತರ ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು. ಅಂದರೆ, ಅಲ್ಲಾಹನ ವಚನವು ಉನ್ನತವಾಗಲು, ಇಸ್ಲಾಂ ಧರ್ಮ ಮತ್ತು ಅದರ ಅನುಯಾಯಿಗಳನ್ನು ರಕ್ಷಿಸಲು ಮತ್ತು ಅದರ ಚಿಹ್ನೆಗಳನ್ನು ಪ್ರಕಟಗೊಳಿಸಲು ಯುದ್ಧ ಮಾಡುವುದು. ಇದನ್ನು ದೈಹಿಕವಾಗಿ ಮತ್ತು ಆರ್ಥಿಕವಾಗಿ ನಿರ್ವಹಿಸಬಹುದು.
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ಅವರು ನನಗೆ ಈ ಎಲ್ಲಾ ಕರ್ಮಗಳನ್ನು ತಿಳಿಸಿದರು. ನಾನು ಪುನಃ ಪುನಃ "ನಂತರ ಯಾವುದು" ಎಂದು ಕೇಳುತ್ತಿದ್ದರೆ, ಅವರು ಉತ್ತರಿಸುತ್ತಲೇ ಇರುತ್ತಿದ್ದರು."