عَنْ أَبِي هُرَيْرَةَ رضي الله عنه قال: قال رَسُولُ الله صلى الله عليه وسلم:
«إِنَّ اللهَ يَغَارُ، وَإِنَّ الْمُؤْمِنَ يَغَارُ، وَغَيْرَةُ اللهِ أَنْ يَأْتِيَ الْمُؤْمِنُ مَا حَرَّمَ عَلَيْهِ».
[صحيح] - [متفق عليه] - [صحيح مسلم: 2761]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ನಿಶ್ಚಯವಾಗಿಯೂ ಅಲ್ಲಾಹು ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಒಬ್ಬ ಸತ್ಯವಿಶ್ವಾಸಿಯೂ ಸಹ ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಸತ್ಯವಿಶ್ವಾಸಿಯು ಅಲ್ಲಾಹು ನಿಷೇಧಿಸಿದ್ದನ್ನು ಮಾಡುವುದು ಅಲ್ಲಾಹನ ಈರ್ಷ್ಯೆಯನ್ನು ಉದ್ರೇಕಿಸುತ್ತದೆ.”
[صحيح] - [متفق عليه] - [صحيح مسلم - 2761]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಯು ಈರ್ಷ್ಯೆಪಡುವಂತೆ, ಕೋಪಿಸುವಂತೆ ಮತ್ತು ದ್ವೇಷಿಸುವಂತೆ ಅಲ್ಲಾಹು ಕೂಡ ಈರ್ಷ್ಯೆಪಡುತ್ತಾನೆ, ಕೋಪಿಸುತ್ತಾನೆ ಮತ್ತು ದ್ವೇಷಿಸುತ್ತಾನೆ. ಸತ್ಯವಿಶ್ವಾಸಿಗಳು ಅಲ್ಲಾಹು ನಿಷೇಧಿಸಿದ ವ್ಯಭಿಚಾರ, ಸಲಿಂಗರತಿ, ಕಳ್ಳತನ, ಮದ್ಯಪಾನ ಮುಂತಾದ ನೀಚಕೃತ್ಯಗಳನ್ನು ಮಾಡುವಾಗ ಅಲ್ಲಾಹನ ಈರ್ಷ್ಯೆಯು ಕೆರಳುತ್ತದೆ.