عَنْ قَتَادَةَ رحمه الله قال:
حَدَّثَنَا أَنَسُ بْنُ مَالِكٍ رَضِيَ اللهُ عَنْهُ أَنَّ رَجُلًا قَالَ: يَا نَبِيَّ اللهِ كَيْفَ يُحْشَرُ الْكَافِرُ عَلَى وَجْهِهِ؟ قَالَ: «أَلَيْسَ الَّذِي أَمْشَاهُ عَلَى الرِّجْلَيْنِ فِي الدُّنْيَا قَادِرًا عَلَى أَنْ يُمْشِيَهُ عَلَى وَجْهِهِ يَوْمَ الْقِيَامَةِ؟» قَالَ قَتَادَةُ: بَلَى وَعِزَّةِ رَبِّنَا.
[صحيح] - [متفق عليه] - [صحيح البخاري: 6523]
المزيــد ...
ಕತಾದ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು:
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮಗೆ ತಿಳಿಸಿದರು: ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಪ್ರವಾದಿಯವರೇ! ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಅವರು ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಕತಾದ ಹೇಳುತ್ತಾರೆ: "ಖಂಡಿತ ಸಾಮರ್ಥ್ಯವಿದೆ. ನಮ್ಮ ಪರಿಪಾಲಕನ (ಅಲ್ಲಾಹನ) ಪ್ರತಿಷ್ಠೆಯ ಮೇಲಾಣೆ!"
[صحيح] - [متفق عليه] - [صحيح البخاري - 6523]
ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: "ಪುನರುತ್ಥಾನ ದಿನದಂದು ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.