عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«مَنْ تَرَدَّى مِنْ جَبَلٍ فَقَتَلَ نَفْسَهُ فَهُوَ فِي نَارِ جَهَنَّمَ يَتَرَدَّى فِيهِ خَالِدًا مُخَلَّدًا فِيهَا أَبَدًا، وَمَنْ تَحَسَّى سُمًّا فَقَتَلَ نَفْسَهُ فَسُمُّهُ فِي يَدِهِ يَتَحَسَّاهُ فِي نَارِ جَهَنَّمَ خَالِدًا مُخَلَّدًا فِيهَا أَبَدًا، وَمَنْ قَتَلَ نَفْسَهُ بِحَدِيدَةٍ فَحَدِيدَتُهُ فِي يَدِهِ يَجَأُ بِهَا فِي بَطْنِهِ فِي نَارِ جَهَنَّمَ خَالِدًا مُخَلَّدًا فِيهَا أَبَدًا».
[صحيح] - [متفق عليه] - [صحيح البخاري: 5778]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದರಲ್ಲಿ ಬೀಳುತ್ತಲೇ ಇರುವನು. ಯಾರು ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನ ವಿಷವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದನ್ನು ಕುಡಿಯುತ್ತಲೇ ಇರುವನು. ಯಾರು ಕಬ್ಬಿಣದ (ಆಯುಧ) ದಿಂದ ತನ್ನನ್ನು ತಾನೇ ಕೊಂದುಕೊಳ್ಳುತ್ತಾನೋ, ಅವನ ಆಯುಧವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದರಿಂದ ತನ್ನ ಹೊಟ್ಟೆಗೆ ಇರಿಯುತ್ತಲೇ ಇರುವನು".
[صحيح] - [متفق عليه] - [صحيح البخاري - 5778]
ಭೂಲೋಕದಲ್ಲಿ ಉದ್ದೇಶಪೂರ್ವಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಖಂಡಿತವಾಗಿಯೂ ಅಂತಹವನಿಗೆ ಪುನರುತ್ಥಾನ ದಿನದಂದು ನರಕಾಗ್ನಿಯಲ್ಲಿ, ಅವನು ಭೂಲೋಕದಲ್ಲಿ ಮಾಡಿಕೊಂಡ ರೀತಿಯಲ್ಲಿಯೇ, ತಕ್ಕ ಪ್ರತಿಫಲ ನೀಡಿ ಶಿಕ್ಷಿಸಲಾಗುತ್ತದೆ. ಯಾರು ಬೆಟ್ಟದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನು ನರಕಾಗ್ನಿಯಲ್ಲಿ, ಅದರ ಬೆಟ್ಟಗಳಿಂದ ಕಣಿವೆಗಳಿಗೆ ಶಾಶ್ವತವಾಗಿ ಸದಾಕಾಲ ಬೀಳುತ್ತಲೇ ಇರುವನು. ಯಾರು ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನ ವಿಷವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ ಸದಾಕಾಲ ಅದನ್ನು ಕುಡಿಯುತ್ತಲೇ ಇರುವನು. ಯಾರು ಕಬ್ಬಿಣದ ಆಯುಧದಿಂದ ತನ್ನ ಹೊಟ್ಟೆಗೆ ಇರಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನ ಆಯುಧವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ ಸದಾಕಾಲ ಅದರಿಂದ ತನ್ನ ಹೊಟ್ಟೆಗೆ ಇರಿಯುತ್ತಲೇ ಇರುವನು.