عَنْ أَبِي هُرَيْرَةَ رَضيَ اللهُ عنهُ أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«لَوْ يَعْلَمُ النَّاسُ مَا فِي النِّدَاءِ وَالصَّفِّ الْأَوَّلِ ثُمَّ لَمْ يَجِدُوا إِلَّا أَنْ يَسْتَهِمُوا عَلَيْهِ لَاسْتَهَمُوا، وَلَوْ يَعْلَمُونَ مَا فِي التَّهْجِيرِ لَاسْتَبَقُوا إِلَيْهِ، وَلَوْ يَعْلَمُونَ مَا فِي الْعَتَمَةِ وَالصُّبْحِ لَأَتَوْهُمَا وَلَوْ حَبْوًا».
[صحيح] - [متفق عليه] - [صحيح مسلم: 437]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಂದು ವೇಳೆ ಜನರಿಗೆ ಅಝಾನ್ (ನಮಾಝ್‌ನ ಕರೆ) ನೀಡುವುದರಲ್ಲಿ ಮತ್ತು (ಜಮಾಅತ್ ನಮಾಝ್‌ನ) ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಏನಿದೆ (ಎಷ್ಟು ಪುಣ್ಯವಿದೆ) ಎಂದು ತಿಳಿದಿದ್ದರೆ, ನಂತರ ಚೀಟಿ ಹಾಕುವುದರ ಹೊರತು ಅವರಿಗೆ ಅದಕ್ಕಾಗಿ ಬೇರೆ ದಾರಿ ಕಾಣದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಚೀಟಿ ಹಾಕುತ್ತಿದ್ದರು. ನಮಾಝ್‌ಗೆ ಬೇಗನೆ ಹೋಗುವುದರಲ್ಲಿ ಏನಿದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಸ್ಪರ್ಧಿಸುತ್ತಿದ್ದರು. 'ಅತಮಾ' (ಇಶಾ ನಮಾಝ್) ಮತ್ತು ಸುಬ್ಹ್ (ಫಜ್ರ್) ನಮಾಝ್‌ಗಳನ್ನು (ಜಮಾಅತ್‌ನಲ್ಲಿ ನಿರ್ವಹಿಸುವುದರಲ್ಲಿ) ಏನಿದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಖಂಡಿತವಾಗಿಯೂ ತೆವಳಿಕೊಂಡಾದರೂ ಅವುಗಳಿಗೆ ಬರುತ್ತಿದ್ದರು".
[صحيح] - [متفق عليه] - [صحيح مسلم - 437]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಂದು ವೇಳೆ ಜನರಿಗೆ ಅಝಾನ್ ನೀಡುವುದರಲ್ಲಿ ಮತ್ತು ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಇರುವ ಶ್ರೇಷ್ಠತೆ, ಒಳಿತು ಮತ್ತು ಸಮೃದ್ಧಿಯ ಬಗ್ಗೆ ತಿಳಿದಿದ್ದರೆ, ನಂತರ ಅವೆರಡಕ್ಕೂ ಆದ್ಯತೆ ಮತ್ತು ಪ್ರಾಮುಖ್ಯತೆ ನೀಡಲು ಅವರಿಗೆ ಚೀಟಿ ಹಾಕುವುದರ ಹೊರತು ಬೇರೆ ದಾರಿ ಕಾಣದಿದ್ದರೆ, ಅವರು ಖಂಡಿತವಾಗಿಯೂ ಅವೆರಡಿಗಾಗಿ ಚೀಟಿ ಹಾಕುತ್ತಿದ್ದರು. ನಮಾಝ್‌ಗಾಗಿ ಅದರ ಮೊದಲ ಸಮಯದಲ್ಲಿ ಬೇಗನೆ ಹೋಗುವುದರಲ್ಲಿ ಏನಿದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಸ್ಪರ್ಧಿಸುತ್ತಿದ್ದರು. ಇಶಾ ನಮಾಝ್ ಮತ್ತು ಫಜ್ರ್ ನಮಾಝ್‌ಗೆ (ಜಮಾಅತ್‌ನಲ್ಲಿ) ಬರುವುದರಲ್ಲಿರುವ ಪುಣ್ಯದ ಪ್ರಮಾಣವು ಅವರಿಗೆ ತಿಳಿದಿದ್ದರೆ, ಅವರು ಮಗು ತನ್ನ ಆರಂಭಿಕ ಹಂತದಲ್ಲಿ ಮೊಣಕಾಲಲ್ಲಿ ತೆವಳುವಂತೆ ತೆವಳಿಕೊಂಡಾದರೂ ಅವುಗಳಿಗೆ ಬರುತ್ತಿದ್ದರು.