1. ಮುಖಪುಟ
  2. ಕೃತಿಗಳು
  3. ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಹದೀಸ್ ನೀವು ಮುಂದಿನ (ಮೊದಲ) ಸಾಲನ್ನು ಪೂರ್ತಿಗೊಳಿಸಿರಿ, ನಂತರ ಅದರ ಹಿಂದಿನದನ್ನು. ಒಂದು ವೇಳೆ (ಸಾಲಿನಲ್ಲಿ) ಅಪೂರ್ಣತೆ (ಕೊರತೆ) ಇರುವುದಾದರೆ, ಅದು ಕೊನೆಯ ಸಾಲಿನಲ್ಲಿರಲಿ

عَنْ أَنَسِ بْنِ مَالِكٍ رَضِيَ اللهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«أَتِمُّوا الصَّفَّ المُقَدَّمَ، ثُمَّ الَّذِي يَلِيهِ، فَمَا كَانَ مِنْ نَقْصٍ فَلْيَكُنْ فِي الصَّفِّ المُؤَخَّرِ».

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಮುಂದಿನ (ಮೊದಲ) ಸಾಲನ್ನು ಪೂರ್ತಿಗೊಳಿಸಿರಿ, ನಂತರ ಅದರ ಹಿಂದಿನದನ್ನು. ಒಂದು ವೇಳೆ (ಸಾಲಿನಲ್ಲಿ) ಅಪೂರ್ಣತೆ (ಕೊರತೆ) ಇರುವುದಾದರೆ, ಅದು ಕೊನೆಯ ಸಾಲಿನಲ್ಲಿರಲಿ."

صحيح رواه أبو داود والنسائي سنن أبي داود - 671

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಮಾಅತ್ ಆಗಿ (ಸಾಮೂಹಿಕವಾಗಿ) ನಮಾಝ್ ನಿರ್ವಹಿಸುವ ಪುರುಷರಿಗೆ, ಮೊದಲ ಸಾಲನ್ನು ಪೂರ್ತಿಗೊಳಿಸುವಂತೆ, ನಂತರ ಅದರ ಹಿಂದಿನ ಸಾಲನ್ನು ಪೂರ್ತಿಗೊಳಿಸುವಂತೆ ಆದೇಶಿಸಿದ್ದಾರೆ — ಇದೇ ಕ್ರಮದಲ್ಲಿ ಮುಂದುವರಿಯಬೇಕು. ಒಂದು ವೇಳೆ ಸಾಲಿನಲ್ಲಿ ಕೊರತೆ ಕಂಡುಬಂದರೆ, ಆ ಕೊರತೆಯು ಕೊನೆಯ ಸಾಲಿನಲ್ಲಿರಬೇಕು.

ಹದೀಸಿನ ಪ್ರಯೋಜನಗಳು

  1. ಸಾಲುಗಳನ್ನು (ಸಫ್) ಸರಿಪಡಿಸುವ ವಿಷಯದಲ್ಲಿರುವ ಪ್ರವಾದಿ ಕ್ರಮವನ್ನು (ಸುನ್ನತ್) ಇದು ವಿವರಿಸುತ್ತದೆ.
  2. ನಮಾಝ್ ಮಾಡುವವರು ಮುಂದಿನ ಸಾಲುಗಳಲ್ಲಿ ಅಪೂರ್ಣತೆಯನ್ನು (ಖಾಲಿ ಜಾಗವನ್ನು) ಬಿಡಬಾರದು. ಬದಲಾಗಿ, ಅಪೂರ್ಣತೆಯು ಕೊನೆಯ ಸಾಲಿನಲ್ಲಿ ಇರಬೇಕು.

ಅನುವಾದಗಳನ್ನು ತೋರಿಸಿ

29 ಭಾಷೆ
EN English الإنجليزية
UR اردو الأوردية
ID Indonesia الإندونيسية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TH ไทย التايلندية
AS অসমীয়া الأسامية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
HU Magyar المجرية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية