عَنْ أَبِي هُرَيْرَةَ رَضِيَ اللهُ عَنْهُ عَنِ النَّبِيِّ صلَّى اللَّهُ عليْه وسلَّمَ، قَالَ:
«إِذَا أُقِيمَتِ الصَّلَاةُ فَلَا صَلَاةَ إلَّا المَكْتُوبَةُ».
[صحيح] - [رواه مسلم] - [صحيح مسلم: 710]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಮಾಝ್‌ಗೆ 'ಇಕಾಮತ್' ಕರೆಯಲಾದರೆ, ಕಡ್ಡಾಯ (ಫರ್ಝ್) ನಮಾಝ್ ಹೊರತುಪಡಿಸಿ ಬೇರೆ ಯಾವುದೇ ನಮಾಝ್ ಇಲ್ಲ."
[صحيح] - [رواه مسلم] - [صحيح مسلم - 710]
ಕಡ್ಡಾಯ (ಫರ್ಝ್) ನಮಾಝ್‌ಗಾಗಿ 'ಇಕಾಮತ್' ಕರೆ ನೀಡಿದ ನಂತರ, ಮಸೀದಿಯಲ್ಲಿರುವವರು ನಫಿಲ್ (ಐಚ್ಛಿಕ) ನಮಾಝ್ ಪ್ರಾರಂಭಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ.