عَنْ أَبِي هُرَيْرَةَ رَضِيَ اللَّهُ عَنْهُ عَنْ رَسُولِ اللَّهِ صَلَّى اللهُ عَلَيْهِ وَسَلَّمَ قَالَ:
«قَالَ اللَّهُ تَبَارَكَ وَتَعَالَى: أَعْدَدْتُ لِعِبَادِي الصَّالِحِينَ، مَا لاَ عَيْنٌ رَأَتْ، وَلاَ أُذُنٌ سَمِعَتْ، وَلاَ خَطَرَ عَلَى قَلْبِ بَشَرٍ» قَالَ أَبُو هُرَيْرَةَ: اقْرَؤُوا إِنْ شِئْتُمْ: {فَلاَ تَعْلَمُ نَفْسٌ مَا أُخْفِيَ لَهُمْ مِنْ قُرَّةِ أَعْيُنٍ} [السجدة: 17].
[صحيح] - [متفق عليه] - [صحيح البخاري: 4779]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: 'ನಾನು ನನ್ನ ಸಜ್ಜನ ದಾಸರಿಗಾಗಿ (ಸ್ವರ್ಗದಲ್ಲಿ) ಏನೇನು ಸಿದ್ಧಪಡಿಸಿದ್ದೇನೆಂದರೆ, (ಅಂತಹ ಸುಖಸಾಧನಗಳನ್ನು) ಯಾವ ಕಣ್ಣೂ ಕಂಡಿಲ್ಲ, ಯಾವ ಕಿವಿಯೂ ಕೇಳಿಲ್ಲ, ಮತ್ತು ಯಾವ ಮಾನವನ ಹೃದಯಕ್ಕೂ ಅದರ ಕಲ್ಪನೆ ಬಂದಿಲ್ಲ' ". ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನೀವು ಇಚ್ಛಿಸುವುದಾದರೆ ಪಠಿಸಿರಿ: "ಯಾವುದೇ ಆತ್ಮಕ್ಕೂ ತಿಳಿದಿಲ್ಲ, ಕಣ್ಣುಗಳಿಗೆ ತಂಪು ನೀಡುವಂತಹ ಏನೆಲ್ಲಾ ಅವರಿಗಾಗಿ ಗುಪ್ತವಾಗಿಡಲಾಗಿದೆ ಎಂದು." [ಸೂರ ಸಜ್ದಾ: 32:17].
[صحيح] - [متفق عليه] - [صحيح البخاري - 4779]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: ನಾನು ಸ್ವರ್ಗದಲ್ಲಿ ನನ್ನ ಸಜ್ಜನ ದಾಸರಿಗೆ ಗೌರವಾರ್ಥವಾಗಿ ಏನೇನು ಸಿದ್ಧಪಡಿಸಿದ್ದೇನೆಂದರೆ, (ಅಂತಹ ವಸ್ತುಗಳು) ಅಸ್ತಿತ್ವದಲ್ಲಿರುವುದನ್ನು ಯಾವ ಕಣ್ಣೂ ಕಂಡಿಲ್ಲ, ಅದರ ವರ್ಣನೆಯನ್ನು ಯಾವ ಕಿವಿಯೂ ಕೇಳಿಲ್ಲ, ಮತ್ತು ಅದರ ಸ್ವರೂಪವು ಯಾವ ಮಾನವನ ಹೃದಯದಲ್ಲೂ ಹೊಳೆದಿಲ್ಲ ಅಥವಾ ಮೂಡಿಲ್ಲ. ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನೀವು ಇಚ್ಛಿಸುವುದಾದರೆ ಪಠಿಸಿರಿ:
"ಯಾವುದೇ ಆತ್ಮಕ್ಕೂ ತಿಳಿದಿಲ್ಲ, ಕಣ್ಣುಗಳಿಗೆ ತಂಪು ನೀಡುವಂತಹ ಏನೆಲ್ಲಾ ಅವರಿಗಾಗಿ ಗುಪ್ತವಾಗಿಡಲಾಗಿದೆ ಎಂದು." [ಸೂರ ಸಜ್ದಾ: 32:17].