عَنْ أَبِي هُرَيْرَةَ رَضِيَ اللَّهُ عَنْهُ، قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«إِنَّ أَوَّلَ زُمْرَةٍ يَدْخُلُونَ الجَنَّةَ عَلَى صُورَةِ القَمَرِ لَيْلَةَ البَدْرِ، ثُمَّ الَّذِينَ يَلُونَهُمْ عَلَى أَشَدِّ كَوْكَبٍ دُرِّيٍّ فِي السَّمَاءِ إِضَاءَةً، لاَ يَبُولُونَ وَلاَ يَتَغَوَّطُونَ، وَلاَ يَتْفِلُونَ وَلاَ يَمْتَخِطُونَ، أَمْشَاطُهُمُ الذَّهَبُ، وَرَشْحُهُمُ المِسْكُ، وَمَجَامِرُهُمْ الأَلُوَّةُ الأَنْجُوجُ، عُودُ الطِّيبِ وَأَزْوَاجُهُمُ الحُورُ العِينُ، عَلَى خَلْقِ رَجُلٍ وَاحِدٍ، عَلَى صُورَةِ أَبِيهِمْ آدَمَ، سِتُّونَ ذِرَاعًا فِي السَّمَاءِ».
[صحيح] - [متفق عليه] - [صحيح البخاري: 3327]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪು ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತಾರೆ (ಅಷ್ಟು ಪ್ರಕಾಶಮಾನವಾಗಿರುತ್ತಾರೆ). ನಂತರ, ಅವರ ನಂತರ ಬರುವವರು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತಿರುತ್ತಾರೆ. ಅವರು (ಸ್ವರ್ಗವಾಸಿಗಳು) ಮೂತ್ರ ವಿಸರ್ಜಿಸುವುದಿಲ್ಲ, ಮಲ ವಿಸರ್ಜಿಸುವುದಿಲ್ಲ, ಉಗುಳುವುದಿಲ್ಲ, ಮತ್ತು ಮೂಗಿನ ಸಿಂಬಳವನ್ನು ಹೊರಹಾಕುವುದಿಲ್ಲ. ಅವರ ಬಾಚಣಿಗೆಗಳು ಚಿನ್ನದ್ದಾಗಿರುತ್ತವೆ, ಅವರ ಬೆವರು ಕಸ್ತೂರಿಯ (ಸುವಾಸನೆಯಂತೆ) ಇರುತ್ತದೆ, ಅವರ ಧೂಪದಾನಿಗಳು ಊದ್ - ಸುವಾಸಿತ ಮರದಿಂದ ಕೂಡಿರುತ್ತವೆ. ಅವರ ಸಂಗಾತಿಗಳು 'ಹೂರ್' (ಅಪ್ಸರೆ) ಆಗಿರುತ್ತಾರೆ. ಅವರೆಲ್ಲರೂ ಒಂದೇ ಆಕೃತಿಯಲ್ಲಿ, ತಮ್ಮ ತಂದೆ ಆದಮ್ (ಅವರ ಮೇಲೆ ಶಾಂತಿಯಿರಲಿ) ರ ರೂಪದಲ್ಲಿ, ಅರವತ್ತು ಮೊಳ ಎತ್ತರವಾಗಿರುತ್ತಾರೆ".
[صحيح] - [متفق عليه] - [صحيح البخاري - 3327]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಗಳಲ್ಲಿ ಸ್ವರ್ಗವನ್ನು ಪ್ರವೇಶಿಸುವ ಮೊದಲ ಗುಂಪಿನ ಮುಖಗಳು ಪ್ರಕಾಶದಲ್ಲಿ ಹುಣ್ಣಿಮೆಯ ರಾತ್ರಿಯ ಚಂದ್ರನ ರೂಪದಲ್ಲಿರುತ್ತವೆ. ನಂತರ, ಅವರ ನಂತರ ಬರುವವರು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರದಂತಿರುತ್ತಾರೆ. ಅವರು ಪರಿಪೂರ್ಣತೆಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅಂದರೆ ಅವರು ಮೂತ್ರ ವಿಸರ್ಜಿಸುವುದಿಲ್ಲ, ಮಲ ವಿಸರ್ಜಿಸುವುದಿಲ್ಲ, ಉಗುಳುವುದಿಲ್ಲ, ಮತ್ತು ಮೂಗಿನ ಸಿಂಬಳವನ್ನು ಹೊರಹಾಕುವುದಿಲ್ಲ. ಅವರ ಬಾಚಣಿಗೆಗಳು ಚಿನ್ನದ್ದಾಗಿರುತ್ತವೆ, ಅವರ ಬೆವರು ಕಸ್ತೂರಿಯಂತಿರುತ್ತದೆ, ಅವರ ಧೂಪದಾನಿಗಳಿಂದ ಅತ್ಯುತ್ತಮ ಮತ್ತು ಪರಿಶುದ್ಧವಾದ ಸುವಾಸನೆ ಹಾಗೂ ಧೂಪವು ಹೊರಹೊಮ್ಮುತ್ತದೆ. ಅವರ ಸಂಗಾತಿಗಳು 'ಹೂರ್' (ಅಪ್ಸರೆ) ಆಗಿರುತ್ತಾರೆ. ಅವರ ಸೃಷ್ಟಿಯು ಎತ್ತರ ಮತ್ತು ಆಕಾರದಲ್ಲಿ ಒಂದೇ ವ್ಯಕ್ತಿಯಂತೆ, ತಮ್ಮ ತಂದೆ ಆದಮ್ ಅವರ ರೂಪದಲ್ಲಿರುತ್ತದೆ. ಅವರ ದೇಹದ ಎತ್ತರವು ಅರವತ್ತು ಮೊಳಗಳಾಗಿರುತ್ತದೆ.