عَنْ عُبَيْدِ اللَّهِ بْنِ مِحْصَنٍ الْأَنْصَارِيِّ رَضيَ اللهُ عنهُ قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ:
«مَنْ أَصْبَحَ مِنْكُمْ مُعَافى فِي جَسَدِهِ، آمِنًا فِي سِرْبِهِ، عِنْدَهُ قُوتُ يَوْمِهِ، فَكَأَنَّمَا حِيزَتْ لَهُ الدُّنْيَا».
[حسن] - [رواه الترمذي وابن ماجه] - [سنن ابن ماجه: 4141]
المزيــد ...
ಉಬೈದುಲ್ಲಾ ಬಿನ್ ಮಿಹ್ಸನ್ ಅಲ್-ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲಿ ಯಾರು ತನ್ನ ದೇಹದಲ್ಲಿ ಆರೋಗ್ಯಪೂರ್ಣನಾಗಿ, ತನ್ನ ವಾಸಸ್ಥಳದಲ್ಲಿ ಸುರಕ್ಷಿತನಾಗಿ, ಮತ್ತು ತನ್ನ ಬಳಿ ಅಂದಿನ ದಿನದ ಆಹಾರವನ್ನು ಹೊಂದಿದವನಾಗಿ ಬೆಳಿಗ್ಗೆ ಏಳುತ್ತಾನೋ (ದಿನವನ್ನು ಆರಂಭಿಸುತ್ತಾನೋ), ಅವನಿಗಾಗಿ ಇಡೀ ಪ್ರಪಂಚವನ್ನೇ ಸಂಗ್ರಹಿಸಿಕೊಟ್ಟಂತಿದೆ."
[حسن] - [رواه الترمذي وابن ماجه] - [سنن ابن ماجه - 4141]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಓ ಮುಸ್ಲಿಮರೇ, ನಿಮ್ಮಲ್ಲಿ ಯಾರು ತಮ್ಮ ದೇಹದಲ್ಲಿ ಆರೋಗ್ಯದಿಂದ ಮತ್ತು ರೋಗರುಜಿನಗಳಿಂದ ಮುಕ್ತರಾಗಿ, ತಮ್ಮ ಆತ್ಮ, ಕುಟುಂಬ, ಅವಲಂಬಿತರು ಮತ್ತು ಮಾರ್ಗದಲ್ಲಿ ಭಯವಿಲ್ಲದೆ ಸುರಕ್ಷಿತರಾಗಿ, ಮತ್ತು ತಮ್ಮ ಬಳಿ ಅಂದಿನ ದಿನಕ್ಕೆ ಸಾಕಾಗುವಷ್ಟು ಹಲಾಲ್ (ಧರ್ಮಸಮ್ಮತ) ಆಹಾರವನ್ನು ಹೊಂದಿದವರಾಗಿ ಬೆಳಿಗ್ಗೆ ಏಳುತ್ತಾರೋ; ಅವನಿಗಾಗಿ ಇಡೀ ಪ್ರಪಂಚವನ್ನೇ ಒಟ್ಟುಗೂಡಿಸಿದಂತಿದೆ.