عَنْ عَائِشَةَ أُمِّ المؤْمنينَ رَضيَ اللهُ عنها قَالَت:
كَانَ رَسُولُ اللهِ صَلَّى اللهُ عَلَيْهِ وَسَلَّمَ إِذَا أَتَى الْمَرِيضَ يَدْعُو لَهُ قَالَ: «أَذْهِبِ الْبَاسَ، رَبَّ النَّاسِ، وَاشْفِ أَنْتَ الشَّافِي، لَا شِفَاءَ إِلَّا شِفَاؤُكَ، شِفَاءً لَا يُغَادِرُ سَقَمًا».
[صحيح] - [متفق عليه] - [صحيح مسلم: 2191]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ರೋಗಿಯ ಬಳಿಗೆ ಬಂದು ಪ್ರಾರ್ಥಿಸುವಾಗ ಹೀಗೆ ಹೇಳುತ್ತಿದ್ದರು: "ಅದ್‌ಹಿಬಿಲ್ ಬಅ್‌ಸ್, ರಬ್ಬನ್ನಾಸ್, ವಶ್‌ಫಿ ಅಂತ ಶ್ಶಾಫೀ, ಲಾ ಶಿಫಾಅ ಇಲ್ಲಾ ಶಿಫಾಉಕ್, ಶಿಫಾಅನ್ ಲಾ ಯುಗಾದಿರು ಸಖಮಾ". (ಅರ್ಥ: ಓ ಮಾನವರ ಪರಿಪಾಲಕನೇ, ಕಾಯಿಲೆಯನ್ನು ದೂರ ಮಾಡು, ಮತ್ತು ಗುಣಪಡಿಸು, ನೀನೇ ಗುಣಪಡಿಸುವವನು. ನಿನ್ನ ಗುಣಪಡಿಸುವಿಕೆಯ ಹೊರತು ಬೇರೆ (ನೈಜ) ಗುಣಪಡಿಸುವಿಕೆ ಇಲ್ಲ. ಯಾವುದೇ ರೋಗವನ್ನು ಉಳಿಸದಂತಹ (ಸಂಪೂರ್ಣ) ಗುಣಪಡಿಸುವಿಕೆಯನ್ನು ನೀಡು.)
[صحيح] - [متفق عليه] - [صحيح مسلم - 2191]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ರೋಗಿಯನ್ನು ಸಂದರ್ಶಿಸಿದಾಗ, ಅವನಿಗಾಗಿ ಪ್ರಾರ್ಥಿಸುತ್ತಾ ಹೀಗೆ ಹೇಳುತ್ತಿದ್ದರು: ಅಲ್ಲಾಹುಮ್ಮ (ಓ ಅಲ್ಲಾಹ್), (ಅದ್‌ಹಿಬ್) ದೂರ ಮಾಡು ಮತ್ತು ನಿವಾರಿಸು (ಅಲ್-ಬಅ್‌ಸ್) ನೋವನ್ನು ಮತ್ತು ರೋಗದ ತೀವ್ರತೆಯನ್ನು, (ರಬ್ಬನ್ನಾಸ್) ಓ ಮಾನವರ ಪ್ರಭು, ಸೃಷ್ಟಿಕರ್ತನೇ ಮತ್ತು ಪರಿಪಾಲಕನೇ, (ವಶ್‌ಫಿ) ಈ ರೋಗಿಯನ್ನು ಗುಣಪಡಿಸು, (ಅಂತ) ಪರಿಶುದ್ಧನಾದ ನೀನು, (ಅಶ್ಶಾಫೀ) ಗುಣಪಡಿಸುವವನು, ನಿನ್ನ 'ಅಶ್ಶಾಫಿ' ಎಂಬ ಹೆಸರಿನ ಮೂಲಕ ನಾನು ನಿನ್ನಲ್ಲಿ ಬೇಡುತ್ತೇನೆ, (ಲಾ ಶಿಫಾಅ) ರೋಗಿಗೆ ಯಾವುದೇ ನೈಜ ಗುಣಪಡಿಸುವಿಕೆ ಲಭಿಸುವುದಿಲ್ಲ (ಇಲ್ಲಾ ಶಿಫಾಉಕ) ನಿನ್ನ ಗುಣಪಡಿಸುವಿಕೆ ಮತ್ತು ಆರೋಗ್ಯ ನೀಡುವಿಕೆಯ ಹೊರತು, (ಶಿಫಾಅನ್) ಸಂಪೂರ್ಣವಾದ ಗುಣಪಡಿಸುವಿಕೆ (ಲಾ ಯುಗಾದಿರು) ಅದು ಬಿಡುವುದಿಲ್ಲ, ಉಳಿಸುವುದಿಲ್ಲ ಮತ್ತು ತೊರೆಯುವುದಿಲ್ಲ (ಸಖಮಾ) ಬೇರೊಂದು ರೋಗವನ್ನು ಅಥವಾ ಅಸ್ವಸ್ಥತೆಯನ್ನು.