عَنْ أَبِي هُرَيْرَةَ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ:
أَنَّهُ كَانَ يَقُولُ إِذَا أَصْبَحَ: «اللهُمَّ بِكَ أَصْبَحْنَا، وَبِكَ أَمْسَيْنَا، وَبِكَ نَحْيَا، وَبِكَ نَمُوتُ، وَإِلَيْكَ النُّشُورُ» وَإِذَا أَمْسَى قَالَ: «بِكَ أَمْسَيْنَا، وَبِكَ أَصْبَحْنَا، وَبِكَ نَحْيَا، وَبِكَ نَمُوتُ، وَإِلَيْكَ النُّشُورُ» قَالَ: وَمَرَّةً أُخْرَى: «وَإِلَيْكَ الْمَصِيرُ».
[حسن] - [رواه أبو داود والترمذي والنسائي في الكبرى وابن ماجه] - [السنن الكبرى للنسائي: 10323]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ):
ಬೆಳಗಾಗುವಾಗ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ." ಸಂಜೆಯಾಗುವಾಗ ಅವರು ಹೀಗೆ ಹೇಳುತ್ತಿದ್ದರು: "ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ." ಇನ್ನೊಂದು ಬಾರಿ ಅವರು ಹೀಗೆ ಹೇಳಿದರು: "ಮರಳುವಿಕೆಯು ನಿನ್ನ ಬಳಿಗೇ ಆಗಿದೆ."
[حسن] - - [السنن الكبرى للنسائي - 10323]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳಗಾಗುವಾಗ, ಅಂದರೆ ಮುಂಜಾನೆಯ ಸಮಯದಲ್ಲಿ ಹೀಗೆ ಹೇಳುತ್ತಿದ್ದರು:
"ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು." ಅಂದರೆ, ನಿನ್ನ ಸಂರಕ್ಷಣೆಯನ್ನು ಅನುಭವಿಸುತ್ತಾ, ನಿನ್ನ ಅನುಗ್ರಹಗಳಲ್ಲಿ ಮುಳುಗಿರುತ್ತಾ, ನಿನ್ನ ಸ್ಮರಣೆಯಲ್ಲಿ ಮಗ್ನರಾಗಿರುತ್ತಾ, ನಿನ್ನ ಹೆಸರಿನೊಂದಿಗೆ ಸಹಾಯ ಯಾಚಿಸುತ್ತಾ, ನಿನ್ನ ಮಾರ್ಗದರ್ಶನದಲ್ಲಿ ಒಳಗೊಂಡಿರುತ್ತಾ, ನಿನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ ಮುಂದುವರಿಯುತ್ತಾ ನಾವು ಬೆಳಗನ್ನು ಪ್ರವೇಶಿಸಿದೆವು. "ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ." ಮೇಲೆ ಹೇಳಿದಂತೆ ಬೆಳಗನ್ನು ಹೇಗೆ ಪ್ರವೇಶಿಸಿದೆಯೋ ಅದೇ ಸ್ಥಿತಿಯಲ್ಲಿ ನಾವು ಸಂಜೆಯನ್ನೂ ಪ್ರವೇಶಿಸಿದೆವು. ಅಂದರೆ, ಓ ಅಲ್ಲಾಹ್! ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು, ಜೀವ ನೀಡುವವನಾದ ನಿನ್ನ ಹೆಸರಿನಲ್ಲಿ ನಾವು ಜೀವಿಸುತ್ತೇವೆ ಮತ್ತು ಸಾವು ನೀಡುವವನಾದ ನಿನ್ನ ಹೆಸರಿನಲ್ಲಿ ನಾವು ಸಾಯುತ್ತೇವೆ. "ಪುನರುತ್ಥಾನವು ನಿನ್ನ ಕಡೆಗೇ ಆಗಿದೆ." ಪುನರುತ್ಥಾನ ಎಂದರೆ ಮರಣಾನಂತರ ಜೀವಂತವಾಗುವುದು. ಒಟ್ಟುಗೂಡಿದ ನಂತರ ಬೇರ್ಪಡುವುದು. ನಮ್ಮ ಜೀವನವು ಎಲ್ಲಾ ಸಮಯದಲ್ಲೂ, ಎಲ್ಲಾ ಸ್ಥಿತಿಗಳಲ್ಲೂ ಹೀಗೆಯೇ ಮುಂದುವರಿಯುತ್ತದೆ. ನಾವು ಇದರಿಂದ ಬೇರ್ಪಡುವುದಿಲ್ಲ ಮತ್ತು ಇದನ್ನು ಬಿಟ್ಟು ದೂರವಾಗುವುದೂ ಇಲ್ಲ.
ಅಸರ್ ಬಳಿಕ ಸಂಜೆಯಾಗುವಾಗ ಅವರು ಹೀಗೆ ಹೇಳುತ್ತಿದ್ದರು: "ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಮರಳುವಿಕೆಯು ನಿನ್ನ ಕಡೆಗೇ ಆಗಿದೆ." ಅಂದರೆ ಇಹಲೋಕದ ಮರಳುವಿಕೆ ಮತ್ತು ಪರಲೋಕದ ಮರಳುವಿಕೆ. ಏಕೆಂದರೆ, ನೀನೇ ನನಗೆ ಜೀವ ನೀಡುವವನು ಮತ್ತು ನೀನೇ ನನಗೆ ಸಾವು ನೀಡುವವನು.