عَنْ عَبْدِ اللَّهِ بْنِ عَمْرِو بْنِ الْعَاصِ رضي الله عنهما أَنَّ رَسُولَ اللَّهِ صَلَّى اللهُ عَلَيْهِ وَسَلَّمَ كَانَ يَدْعُو بِهَؤُلَاءِ الْكَلِمَاتِ:
«اللَّهُمَّ إِنِّي أَعُوذُ بِكَ مِنْ غَلَبَةِ الدَّيْنِ، وَغَلَبَةِ الْعَدُوِّ، وَشَمَاتَةِ الْأَعْدَاءِ».
[صحيح] - [رواه النسائي وأحمد] - [سنن النسائي: 5475]
المزيــد ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದ್ದರು:
"ಓ ಅಲ್ಲಾಹ್! ನಾನು ನಿನ್ನಲ್ಲಿ ಸಾಲದ ಪ್ರಾಬಲ್ಯದಿಂದ, ಶತ್ರುಗಳ ಪ್ರಾಬಲ್ಯದಿಂದ ಮತ್ತು ಶತ್ರುಗಳು ಸಂಭ್ರಮಿಸುವುದರಿಂದ ರಕ್ಷೆ ಬೇಡುತ್ತೇನೆ."
[صحيح] - [رواه النسائي وأحمد] - [سنن النسائي - 5475]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಕೆಳಗಿನ ವಿಷಯಗಳ ಬಗ್ಗೆ ರಕ್ಷೆ ಬೇಡುತ್ತಿದ್ದರು:
ಒಂದು: "ಓ ಅಲ್ಲಾಹ್! ರಕ್ಷೆ ಬೇಡುತ್ತೇನೆ." ಅಂದರೆ ನಿನ್ನಲ್ಲಿ ಮಾತ್ರ ಆಶ್ರಯ ಮತ್ತು ಅಭಯ ಯಾಚಿಸುತ್ತೇನೆ. "ಸಾಲದ ಪ್ರಾಬಲ್ಯದಿಂದ" ಅಂದರೆ ಅದರ ಒತ್ತಡ, ವ್ಯಥೆ ಮತ್ತು ದುಃಖದಿಂದ ರಕ್ಷೆ ಬೇಡುತ್ತೇನೆ ಮತ್ತು ಅದನ್ನು ತೀರಿಸಲು ನನಗೆ ಸಹಾಯ ಮಾಡಬೇಕೆಂದು ಬೇಡುತ್ತೇನೆ.
ಎರಡು: "ಶತ್ರುಗಳ ಪ್ರಾಬಲ್ಯದಿಂದ" ಅಂದರೆ, ಅವರು ನನ್ನ ಮೇಲೆ ನಿರಂಕುಶಾಧಿಕಾರ ಚಲಾಯಿಸುವುದರಿಂದ ನಾನು ರಕ್ಷೆ ಬೇಡುತ್ತೇನೆ. ಅವರ ಉಪಟಳಗಳನ್ನು ಕೊನೆಗೊಳಿಸುವಂತೆ ಮತ್ತು ಅವರ ಮೇಲೆ ವಿಜಯ ದಯಪಾಲಿಸುವಂತೆ ಬೇಡುತ್ತೇನೆ.
ಮೂರು: "ಶತ್ರುಗಳು ಸಂಭ್ರಮಿಸುವುದರಿಂದ" ಅಂದರೆ, ಮುಸ್ಲಿಮರಿಗೆ ಸಂಕಷ್ಟ ಮತ್ತು ದುರಂತಗಳು ಬಾಧಿಸುವುದನ್ನು ಕಂಡು ಅವರು ಸಂಭ್ರಮ ಪಡುವುದರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.