عَنْ عُقْبَةَ بْنِ عَامِرٍ رضي الله عنه قَالَ:
قُلْتُ: يَا رَسُولَ اللهِ مَا النَّجَاةُ؟ قَالَ: «امْلِكْ عَلَيْكَ لِسَانَكَ، وَلْيَسَعْكَ بَيْتُكَ، وَابْكِ عَلَى خَطِيئَتِكَ».
[صحيح] - [رواه الترمذي وأحمد] - [سنن الترمذي: 2406]
المزيــد ...
ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಮೋಕ್ಷ ಎಂದರೇನು?" ಅವರು ಉತ್ತರಿಸಿದರು: "ನಿಮ್ಮ ನಾಲಿಗೆಯನ್ನು ನಿಯಂತ್ರಿಸಿ, ನಿಮ್ಮ ಮನೆ ನಿಮಗೆ ವಿಶಾಲವಾಗಿರಲಿ, ಮತ್ತು ನಿಮ್ಮ ಪಾಪಗಳಿಗಾಗಿ ಅತ್ತಿರಿ."
[صحيح] - [رواه الترمذي وأحمد] - [سنن الترمذي - 2406]
ಉಕ್ಬ ಇಬ್ನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಹಲೋಕ ಮತ್ತು ಪರಲೋಕದಲ್ಲಿ ಒಬ್ಬ ಸತ್ಯವಿಶ್ವಾಸಿಗೆ ಮೋಕ್ಷ ದೊರೆಯುವ ಮಾರ್ಗಗಳ ಬಗ್ಗೆ ಕೇಳಿದರು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನೀವು ಮೂರು ವಿಷಯಗಳಿಗೆ ಬದ್ಧರಾಗಿರಬೇಕು.
ಮೊದಲನೆಯದು: ಒಳಿತಲ್ಲದ ವಿಷಯಗಳಿಂದ ಮತ್ತು ಯಾವುದೇ ಕೆಟ್ಟದ್ದನ್ನು ಹೇಳುವುದರಿಂದ ನಿಮ್ಮ ನಾಲಿಗೆಯನ್ನು ರಕ್ಷಿಸಿರಿ. ಒಳ್ಳೆಯದನ್ನು ಹೊರತುಪಡಿಸಿ ಬೇರೇನೂ ಮಾತನಾಡಬೇಡಿ.
ಎರಡನೆಯದು: ಏಕಾಂತದಲ್ಲಿ ಅಲ್ಲಾಹನನ್ನು ಆರಾಧಿಸುವುದಕ್ಕಾಗಿ ನಿಮ್ಮ ಮನೆಯಲ್ಲಿಯೇ ಇರಿ, ಸರ್ವಶಕ್ತನಾದ ಅಲ್ಲಾಹನಿಗೆ ವಿಧೇಯತೆ ತೋರುವ ಕರ್ಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಮತ್ತು ಫಿತ್ನಗಳ (ಪರೀಕ್ಷೆಗಳು, ಗೊಂದಲಗಳು) ಸಮಯದಲ್ಲಿ ಅವುಗಳಿಂದ ದೂರವಾಗಿ ನಿಮ್ಮ ಮನೆಯಲ್ಲಿರಿ.
ಮೂರನೆಯದು: ನೀವು ಮಾಡಿದ ಪಾಪಗಳಿಗಾಗಿ ಅತ್ತಿರಿ ವಿಷಾದಪಡಿರಿ ಮತ್ತು ಪಶ್ಚಾತ್ತಾಪಪಡಿರಿ.