+ -

عَنْ عَائِشَةَ أُمِّ المُؤْمِنين رَضِيَ اللَّهُ عَنْهَا، قَالَتْ:
مَا رَأَيْتُ النَّبِيَّ صَلَّى اللهُ عَلَيْهِ وَسَلَّمَ مُسْتَجْمِعًا قَطُّ ضَاحِكًا، حَتَّى أَرَى مِنْهُ لَهَوَاتِهِ، إِنَّمَا كَانَ يَتَبَسَّمُ.

[صحيح] - [متفق عليه] - [صحيح البخاري: 6092]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಪೂರ್ಣವಾಗಿ ನಗುವುದನ್ನು ನೋಡಿಲ್ಲ, ಬದಲಿಗೆ, ಅವರು ಕೇವಲ ಮಂದಹಾಸ ಬೀರುತ್ತಿದ್ದರು."

[صحيح] - [متفق عليه] - [صحيح البخاري - 6092]

ವಿವರಣೆ

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಅತಿಯಾಗಿ ನಗುತ್ತಿರಲಿಲ್ಲ. ಕಿರುನಾಲಗೆ ಎಂದರೆ ಗಂಟಲಿನ ಮೇಲ್ಭಾಗದಲ್ಲಿ ನೇತಾಡುವ ಮಾಂಸದ ತುಂಡು. ಬದಲಿಗೆ, ಅವರು ಕೇವಲ ಮಂದಹಾಸ ಬೀರುತ್ತಿದ್ದರು."

ಹದೀಸಿನ ಪ್ರಯೋಜನಗಳು

  1. ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂತೋಷವಾದಾಗ, ಅಥವಾ ಅವರಿಗೆ ಒಂದು ವಿಷಯವು ಇಷ್ಟವಾದಾಗ, ಅವರ ನಗು ಕೇವಲ ಮಂದಹಾಸವಾಗಿತ್ತು.
  2. ಇಬ್ನ್ ಹಜರ್ ಹೇಳಿದರು: "ನಾನು ಅವರನ್ನು ಪೂರ್ಣವಾಗಿ ನಗುವುದನ್ನು ನೋಡಿಲ್ಲ" ಅಂದರೆ, ಅವರು ನಗುವಿನಲ್ಲಿ ಸಂಪೂರ್ಣ ತೊಡಗಿಕೊಂಡು ಪೂರ್ಣವಾಗಿ ನಗುವುದನ್ನು ನಾನು ನೋಡಿಲ್ಲ.
  3. ಅತಿಯಾಗಿ ನಗುವುದು ಮತ್ತು ಗಹಗಹಿಸಿ ನಗುವುದು ಸಜ್ಜನರ ಗುಣಲಕ್ಷಣಗಳಲ್ಲ.
  4. ಅತಿಯಾದ ನಗು ಇತರರ ಮುಂದೆ ವ್ಯಕ್ತಿಯ ಘನತೆ ಮತ್ತು ಗಾಂಭೀರ್ಯವನ್ನು ಕಡಿಮೆ ಮಾಡುತ್ತದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية النيبالية اليوروبا الدرية الرومانية المجرية الموري الأورومو الأوكرانية الجورجية المقدونية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು