عَنْ عَائِشَةَ أُمِّ المؤْمنينَ رَضيَ اللهُ عنها قَالَتْ: قَالَ رَسُولُ اللهِ صَلَّى اللهُ عَلَيْهِ وَسَلَّمَ فِي مَرَضِهِ الَّذِي لَمْ يَقُمْ مِنْهُ:
«لَعَنَ اللهُ الْيَهُودَ وَالنَّصَارَى، اتَّخَذُوا قُبُورَ أَنْبِيَائِهِمْ مَسَاجِدَ» قَالَتْ: فَلَوْلَا ذَاكَ أُبْرِزَ قَبْرُهُ، غَيْرَ أَنَّهُ خُشِيَ أَنْ يُتَّخَذَ مَسْجِدًا.
[صحيح] - [متفق عليه] - [صحيح مسلم: 529]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಗುಣಮುಖರಾಗದ ತಮ್ಮ ಕಾಯಿಲೆಯಲ್ಲಿದ್ದಾಗ ಹೇಳಿದರು:
"ಅಲ್ಲಾಹನು ಯಹೂದಿಗಳು ಮತ್ತು ಕ್ರೈಸ್ತರನ್ನು ಶಪಿಸಲಿ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡಿಕೊಂಡರು." ಆಯಿಶ ಹೇಳಿದರು: "ಆ ನಿಷೇಧವಿಲ್ಲದಿರುತ್ತಿದ್ದರೆ ಅವರ ಸಮಾಧಿಯನ್ನು ಹೊರಗೆ ಕಾಣುವಂತೆ ನಿರ್ಮಿಸಲಾಗುತ್ತಿತ್ತು, ಆದರೆ ಜನರು ಅದನ್ನು ಮಸೀದಿಯನ್ನಾಗಿ ಮಾಡಬಹುದೆಂಬ ಭಯವಿತ್ತು."
[صحيح] - [متفق عليه] - [صحيح مسلم - 529]
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಅದರಲ್ಲಿಯೇ ಮರಣಹೊಂದಿದ ತಮ್ಮ ಕಾಯಿಲೆಯಲ್ಲಿ ಹೇಳಿದರು: ಅಲ್ಲಾಹು ಯಹೂದಿಗಳು ಮತ್ತು ಕ್ರೈಸ್ತರನ್ನು ಶಪಿಸಲಿ, ಮತ್ತು ಅವರನ್ನು ತನ್ನ ಕರುಣೆಯಿಂದ ದೂರವಿಡಲಿ. ಅದೇಕೆಂದರೆ ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡಿಕೊಂಡರು. ಅಂದರೆ, ಅವುಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಿದರು, ಅಥವಾ ಅವುಗಳ ಬಳಿ ಅಥವಾ ಅವುಗಳ ದಿಕ್ಕಿಗೆ ಪ್ರಾರ್ಥಿಸಿದರು. ನಂತರ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಆ ನಿಷೇಧ ಮತ್ತು ಎಚ್ಚರಿಕೆ ಇಲ್ಲದಿರುತ್ತಿದ್ದರೆ, ಮತ್ತು ಯಹೂದಿಗಳು ಹಾಗೂ ಕ್ರೈಸ್ತರು ತಮ್ಮ ಪ್ರವಾದಿಗಳ ಸಮಾಧಿಗಳೊಂದಿಗೆ ಮಾಡಿದಂತೆ ಜನರು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಯೊಂದಿಗೂ ಮಾಡಬಹುದೆಂಬ ಭಯವು ಸಹಾಬಿಗಳಿಗೆ ಇಲ್ಲದಿರುತ್ತಿದ್ದರೆ, ಅವರ ಸಮಾಧಿಯನ್ನು ಹೊರಗೆ ಕಾಣುವಂತೆ ನಿರ್ಮಿಸಲಾಗುತ್ತಿತ್ತು ಮತ್ತು ಪ್ರದರ್ಶಿಸಲಾಗುತ್ತಿತ್ತು.