+ -

عَن الحَسَنِ قال: حَدَّثنا جُنْدَبُ بْنُ عَبْدِ اللَّهِ رضي الله عنه، فِي هَذَا المَسْجِدِ، وَمَا نَسِينَا مُنْذُ حَدَّثَنَا، وَمَا نَخْشَى أَنْ يَكُونَ جُنْدُبٌ كَذَبَ عَلَى رَسُولِ اللَّهِ صَلَّى اللهُ عَلَيْهِ وَسَلَّمَ، قَالَ: قَالَ رَسُولُ اللَّهِ صلّى الله عليه وسلم:
«كَانَ فِيمَنْ كَانَ قَبْلَكُمْ رَجُلٌ بِهِ جُرْحٌ، فَجَزِعَ، فَأَخَذَ سِكِّينًا فَحَزَّ بِهَا يَدَهُ، فَمَا رَقَأَ الدَّمُ حَتَّى مَاتَ، قَالَ اللَّهُ تَعَالَى: بَادَرَنِي عَبْدِي بِنَفْسِهِ، حَرَّمْتُ عَلَيْهِ الجَنَّةَ».

[صحيح] - [متفق عليه] - [صحيح البخاري: 3463]
المزيــد ...

ಹಸನ್ ರಿಂದ ವರದಿ. ಅವರು ಹೇಳಿದರು: ಜುಂದುಬ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಈ ಮಸೀದಿಯಲ್ಲಿ ನಮಗೆ ಒಂದು ಹದೀಸ್ ತಿಳಿಸಿದರು - ಅವರು ನಮಗೆ ತಿಳಿಸಿದಾಗಿನಿಂದ ನಾವು ಆ ಹದೀಸನ್ನು ಮರೆತಿಲ್ಲ ಮತ್ತು ಜುಂದುಬ್ ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸುಳ್ಳು ಹೇಳಿರಬಹುದೆಂದು ನಾವು ಭಯಪಡುವುದಿಲ್ಲ - ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮಗಿಂತ ಹಿಂದಿನ (ಸಮುದಾಯದಲ್ಲಿ) ಒಬ್ಬ ವ್ಯಕ್ತಿಯಿದ್ದನು. ಅವನಿಗೆ ಗಾಯವಾಗಿತ್ತು. ಅವನು ತಾಳ್ಮೆ ಕಳೆದುಕೊಂಡು ಚಾಕುವಿನಿಂದ ತನ್ನ ಕೈಯನ್ನು ಕತ್ತರಿಸಿಕೊಂಡನು. ರಕ್ತ ಹರಿಯುವುದು ನಿಲ್ಲದೆ ನಂತರ ಅವನು ಸತ್ತನು. ಅಲ್ಲಾಹು ಹೇಳಿದನು: 'ನನ್ನ ದಾಸನು ತನ್ನ ಪ್ರಾಣದೊಂದಿಗೆ ಆತುರಪಟ್ಟಿದ್ದಾನೆ. ನಾನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದೇನೆ.'"

[صحيح] - [متفق عليه] - [صحيح البخاري - 3463]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಮ್ಮ ಹಿಂದಿನ ಸಮುದಾಯದಲ್ಲಿ ಒಬ್ಬ ವ್ಯಕ್ತಿಯಿದ್ದನು. ಅವನಿಗೆ ಗಾಯವಾಗಿತ್ತು. ಅವನು ತಾಳ್ಮೆ ಕಳೆದುಕೊಂಡು ನೋವನ್ನು ಸಹಿಸಲಾಗದೆ ಬೇಗನೆ ಸಾಯಲು ಚಾಕುವಿನಿಂದ ತನ್ನ ಕೈಯನ್ನು ಕತ್ತರಿಸಿಕೊಂಡನು. ರಕ್ತ ಹರಿಯುವುದು ನಿಲ್ಲದೆ ಅವನು ಸತ್ತುಹೋದನು. ಅಲ್ಲಾಹು ಹೇಳಿದನು: "ನನ್ನ ದಾಸನು ತನ್ನ ಪ್ರಾಣದೊಂದಿಗೆ ಆತುರಪಟ್ಟಿದ್ದಾನೆ. ನಾನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದೇನೆ."

ಹದೀಸಿನ ಪ್ರಯೋಜನಗಳು

  1. ತೊಂದರೆಗಳು ಬರುವಾಗ ತಾಳ್ಮೆ ವಹಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಹಾಗೆಯೇ ನೋವುಗಳಿಂದ ಬೇಸರಪಡಬಾರದೆಂದು ತಿಳಿಸಲಾಗಿದೆ. ಏಕೆಂದರೆ ಅದು ಅದಕ್ಕಿಂತಲೂ ಗಂಭೀರ ಸ್ಥಿತಿಗೆ ತಲುಪಿಸುವ ಸಾಧ್ಯತೆಯಿದೆ.
  2. ಹಿಂದಿನ ಸಮುದಾಯಗಳ ಘಟನೆಗಳನ್ನು ತಿಳಿಸಿ ಎಚ್ಚರವಹಿಸಬೇಕೆಂದು ಹೇಳಲಾಗಿದೆ. ಏಕೆಂದರೆ ಆ ಘಟನೆಗಳಲ್ಲಿ ಒಳಿತು ಮತ್ತು ಉಪದೇಶಗಳಿವೆ.
  3. ಇಬ್ನ್ ಹಜರ್ ಹೇಳುತ್ತಾರೆ: ಅಲ್ಲಾಹನ ಹಕ್ಕುಗಳು ಮತ್ತು ಅವನು ತನ್ನ ಸೃಷ್ಟಿಗಳಿಗೆ ತೋರುವ ಕರುಣೆಯನ್ನು ತಿಳಿಸಲಾಗಿದೆ. ಏಕೆಂದರೆ ಆತ್ಮಹತ್ಯೆ ಮಾಡುವುದನ್ನು ಅವನು ಅವರಿಗೆ ನಿಷಿದ್ಧಗೊಳಿಸಿದ್ದಾನೆ. ಏಕೆಂದರೆ ಆತ್ಮಗಳು ಅಲ್ಲಾಹನ ಒಡೆತನದಲ್ಲಿ ಸೇರಿವೆ.
  4. ಆತ್ಮಹತ್ಯೆಗೆ ಕಾರಣವಾಗುವ ಮಾರ್ಗಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಮತ್ತು ಅದರ ಬಗ್ಗೆ ಉಗ್ರ ಎಚ್ಚರಿಕೆ ನೀಡಲಾಗಿದೆ.
  5. ಇಬ್ನ್ ಹಜರ್ ಹೇಳುತ್ತಾರೆ: ಅವನು ತನ್ನ ಕೈಯನ್ನು ಕತ್ತರಿಸಿದ್ದು ಸಾಯುವ ಉದ್ದೇಶದಿಂದಾಗಿತ್ತು. ಅದನ್ನು ಗುಣಪಡಿಸುವ ಉದ್ದೇಶದಿಂದಲ್ಲ. ಗುಣಪಡಿಸುವ ಉದ್ದೇಶದಿಂದಾಗಿದ್ದರೆ ಅದರಿಂದ ಪ್ರಯೋಜನವಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية الدرية الرومانية المجرية الموري المالاجاشية الولوف الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು