عَنْ أَبِي هُرَيْرَةَ رَضِيَ اللَّهُ عَنْهُ:
عَنِ النَّبِيِّ صَلَّى اللهُ عَلَيْهِ وَسَلَّمَ قَالَ: «قَالَ اللَّهُ: كَذَّبَنِي ابْنُ آدَمَ وَلَمْ يَكُنْ لَهُ ذَلِكَ، وَشَتَمَنِي وَلَمْ يَكُنْ لَهُ ذَلِكَ، فَأَمَّا تَكْذِيبُهُ إِيَّايَ فَقَوْلُهُ: لَنْ يُعِيدَنِي، كَمَا بَدَأَنِي، وَلَيْسَ أَوَّلُ الخَلْقِ بِأَهْوَنَ عَلَيَّ مِنْ إِعَادَتِهِ، وَأَمَّا شَتْمُهُ إِيَّايَ فَقَوْلُهُ: اتَّخَذَ اللَّهُ وَلَدًا وَأَنَا الأَحَدُ الصَّمَدُ، لَمْ أَلِدْ وَلَمْ أُولَدْ، وَلَمْ يَكُنْ لِي كُفْؤًا أَحَدٌ».
[صحيح] - [رواه البخاري] - [صحيح البخاري: 4974]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಹೇಳಿದನು: ಆದಮರ ಪುತ್ರ ನನ್ನನ್ನು ನಿಷೇಧಿಸಿದ್ದಾನೆ. ಅವನಿಗೆ ಹಾಗೆ ಮಾಡುವ ಯಾವುದೇ ಹಕ್ಕಿಲ್ಲ. ಅವನು ನನ್ನನ್ನು ನಿಂದಿಸಿದ್ದಾನೆ. ಅವನಿಗೆ ಹಾಗೆ ಮಾಡುವ ಯಾವುದೇ ಹಕ್ಕಿಲ್ಲ. ಅವನು ನನ್ನನ್ನು ನಿಷೇಧಿಸಿದ್ದು ಹೇಗೆಂದರೆ, ಅವನು ಹೇಳಿದ ಈ ಮಾತು: "ಅಲ್ಲಾಹು ನನ್ನನ್ನು ಮೊದಲ ಬಾರಿ ಸೃಷ್ಟಿಸಿದಂತೆ ಪುನಃ ಸೃಷ್ಟಿಸುವುದಿಲ್ಲ." ಅವನನ್ನು ಮೊದಲ ಬಾರಿ ಸೃಷ್ಟಿಸುವುದು ಅವನನ್ನು ಪುನಃ ಸೃಷ್ಟಿಸುವುದಕ್ಕಿಂತಲೂ ಸುಲಭವಲ್ಲ. ಅವನು ನನ್ನನ್ನು ನಿಂದಿಸಿದ್ದು ಹೇಗೆಂದರೆ, ಅವನು ಹೇಳಿದ ಈ ಮಾತು: “ಅಲ್ಲಾಹನಿಗೆ ಒಬ್ಬ ಪುತ್ರನಿದ್ದಾನೆ.” ನಾನಂತೂ ಏಕೈಕನು ಮತ್ತು ನಿರಪೇಕ್ಷನು. ನಾನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಯಾರಿಂದಲೂ ಜನ್ಮ ಪಡೆದಿಲ್ಲ. ನನಗೆ ಸರಿಸಾಟಿಯಾಗಿ ಯಾರೂ ಇಲ್ಲ."
[صحيح] - [رواه البخاري] - [صحيح البخاري - 4974]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಕುದ್ಸಿ (ಪವಿತ್ರ) ಹದೀಸಿನಲ್ಲಿ ಬಹುದೇವವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ಬಗ್ಗೆ, ಅವರು ಅವನನ್ನು ನಿಷೇಧಿಸುತ್ತಿದ್ದಾರೆ ಮತ್ತು ಅವನಿಗೆ ಕೊರತೆ ಹಾಗೂ ನ್ಯೂನತೆಗಳಿವೆಯೆಂದು ಆರೋಪಿಸುತ್ತಿದ್ದಾರೆ. ಅವರಿಗೆ ಹಾಗೆ ಮಾಡುವ ಯಾವುದೇ ಹಕ್ಕಿಲ್ಲ.
ಅಲ್ಲಾಹನ ವಿಷಯದಲ್ಲಿ ಅವನ ನಿಷೇಧವೇನೆಂದರೆ: ಅಲ್ಲಾಹು ಅವರನ್ನು ಮೊದಲ ಬಾರಿಗೆ ಶೂನ್ಯದಿಂದ ಸೃಷ್ಟಿಸಿದಂತೆ, ಅವರ ಮರಣಾನಂತರ ಅವರನ್ನು ಪುನಃ ಸೃಷ್ಟಿಸುವುದಿಲ್ಲ ಎಂಬ ಅವರ ದಾವೆ. ಅಲ್ಲಾಹು ಅವರಿಗೆ ಉತ್ತರಿಸುತ್ತಾ ಹೇಳುತ್ತಾನೆ: ಮೊದಲ ಬಾರಿಗೆ ಶೂನ್ಯದಿಂದ ಸೃಷ್ಟಿಸಿದವನು ಪುನಃ ಸೃಷ್ಟಿಸಲು ಸಾಮರ್ಥ್ಯವುಳ್ಳವನಾಗಿದ್ದಾನೆ, ಮಾತ್ರವಲ್ಲ, ಅದು ಅವನ ಮಟ್ಟಿಗೆ ಸುಲಭವಾಗಿದೆ. ಅಲ್ಲಾಹನಿಗೆ ಸಂಬಂಧಿಸಿದಂತೆ ಸೃಷ್ಟಿ ಮತ್ತು ಪುನರ್ ಸೃಷ್ಟಿ ಎರಡೂ ಸಮಾನವಾಗಿವೆ. ಏಕೆಂದರೆ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅವರ ನಿಂದನೆಯೇನೆಂದರೆ: "ಅಲ್ಲಾಹನಿಗೆ ಒಬ್ಬ ಪುತ್ರನಿದ್ದಾನೆ" ಎಂಬ ಅವರ ಮಾತು. ಅಲ್ಲಾಹು ಅವರಿಗೆ ಉತ್ತರಿಸುತ್ತಾ ಹೇಳುತ್ತಾನೆ: ಅವನು ಏಕೈಕನಾಗಿದ್ದಾನೆ, ಅವನು ತನ್ನ ಹೆಸರುಗಳಲ್ಲಿ, ಗುಣಲಕ್ಷಣಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಎಲ್ಲಾ ಸಂಪೂರ್ಣತೆಗಳಿಂದಲೂ ಅದ್ವಿತೀಯನಾಗಿದ್ದಾನೆ, ಎಲ್ಲಾ ರೀತಿಯ ಕೊರತೆ ಮತ್ತು ನ್ಯೂನತೆಗಳಿಂದ ಮುಕ್ತನಾಗಿದ್ದಾನೆ, ಯಾರನ್ನೂ ಅವಲಂಬಿಸದ ಮತ್ತು ಎಲ್ಲರೂ ಅವನನ್ನು ಅವಲಂಬಿಸುವ ನಿರಪೇಕ್ಷನಾಗಿದ್ದಾನೆ, ಅವನು ಯಾರಿಗೂ ತಂದೆಯಲ್ಲ ಮತ್ತು ಅವನು ಯಾರ ಪುತ್ರನೂ ಅಲ್ಲ, ಅವನಿಗೆ ಸರಿಸಾಟಿಯಾಗಿ, ಸರಿಸಮಾನರಾಗಿ ಯಾರೂ ಇಲ್ಲ. ಅವನು ಪರಿಶುದ್ಧನು ಮತ್ತು ಅತ್ಯುನ್ನತನು.