عَن عَبْدِ اللهِ بْنِ عَمْرِو بْنِ الْعَاصِ رضي الله عنهما أَنَّهُ سَمِعَ رَسُولَ اللهِ صَلَّى اللهُ عَلَيْهِ وَسَلَّمَ، يَقُولُ:
«إِنَّ قُلُوبَ بَنِي آدَمَ كُلَّهَا بَيْنَ إِصْبَعَيْنِ مِنْ أَصَابِعِ الرَّحْمَنِ، كَقَلْبٍ وَاحِدٍ، يُصَرِّفُهُ حَيْثُ يَشَاءُ» ثُمَّ قَالَ رَسُولُ اللهِ صَلَّى اللهُ عَلَيْهِ وَسَلَّمَ: «اللهُمَّ مُصَرِّفَ الْقُلُوبِ صَرِّفْ قُلُوبَنَا عَلَى طَاعَتِكَ».
[صحيح] - [رواه مسلم] - [صحيح مسلم: 2654]
المزيــد ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ಹೃದಯಗಳನ್ನು ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."
[صحيح] - [رواه مسلم] - [صحيح مسلم - 2654]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ಪರಮ ದಯಾಮಯನಾದ ಅಲ್ಲಾಹನ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ. ಅವನು ಇಚ್ಛಿಸಿದಂತೆ ಅದನ್ನು ಸತ್ಯದ ಮೇಲೆ ನಿಲ್ಲಿಸುತ್ತಾನೆ, ಮತ್ತು ಅವನು ಇಚ್ಛಿಸಿದಂತೆ ಅದನ್ನು ಸತ್ಯದಿಂದ ದೂರ ಮಾಡುತ್ತಾನೆ. ಅವನು ಎಲ್ಲಾ ಹೃದಯಗಳನ್ನು ನಿಯಂತ್ರಿಸುವುದು ಒಂದು ಹೃದಯವನ್ನು ನಿಯಂತ್ರಿಸಿದಂತೆ. ಯಾವುದೇ ವಿಷಯವು ಅವನನ್ನು ಮತ್ತೊಂದು ವಿಷಯದಿಂದ ದೂರವಿಡುವುದಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದರು: "ಓ ಅಲ್ಲಾಹ್, ಹೃದಯಗಳನ್ನು ಕೆಲವೊಮ್ಮೆ ವಿಧೇಯತೆಗೆ ಮತ್ತು ಕೆಲವೊಮ್ಮೆ ಅವಿಧೇಯತೆಗೆ, ಕೆಲವೊಮ್ಮೆ ಸ್ಮರಣೆಗೆ ಮತ್ತು ಕೆಲವೊಮ್ಮೆ ಮರೆವಿಗೆ ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."