+ -

عَن أَبِي سَعِيدٍ الْخُدْرِيِّ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِذَا تَثَاءَبَ أَحَدُكُمْ فَلْيُمْسِكْ بِيَدِهِ عَلَى فِيهِ، فَإِنَّ الشَّيْطَانَ يَدْخُلُ».

[صحيح] - [رواه مسلم] - [صحيح مسلم: 2995]
المزيــد ...

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳಲಿ. ಏಕೆಂದರೆ ಖಂಡಿತವಾಗಿಯೂ ಶೈತಾನನು ಪ್ರವೇಶಿಸುತ್ತಾನೆ."

[صحيح] - [رواه مسلم] - [صحيح مسلم - 2995]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಾದರೂ ಸೋಮಾರಿತನದಿಂದ, ಹೊಟ್ಟೆ ತುಂಬಿರುವುದರಿಂದ ಅಥವಾ ಇತರ ಕಾರಣಗಳಿಂದ ಬಾಯಿಯನ್ನು ತೆರೆದು ಆಕಳಿಸುವುದಾದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲಿಟ್ಟು ಅದನ್ನು ಮುಚ್ಚಿಕೊಳ್ಳಲಿ. ಏಕೆಂದರೆ ಅವನು ಬಾಯಿಯನ್ನು ತೆರೆದಿಟ್ಟರೆ ಶೈತಾನನು ಬಾಯೊಳಗೆ ಪ್ರವೇಶಿಸುತ್ತಾನೆ. ಕೈ ಇಟ್ಟರೆ ಅದು ಅವನು ಪ್ರವೇಶಿಸುವುದನ್ನು ತಡೆಯುತ್ತದೆ.

ಹದೀಸಿನ ಪ್ರಯೋಜನಗಳು

  1. ಒಬ್ಬ ವ್ಯಕ್ತಿಯು ಆಕಳಿಸಲು ಉದ್ದೇಶಿಸಿದರೆ, ಅವನು ಅದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು. ಅಂದರೆ ಬಾಯಿ ತೆರೆಯದೆ ಮುಚ್ಚಿಡುವ ಮೂಲಕ ಅದನ್ನು ತಡೆಗಟ್ಟಬೇಕು. ತನ್ನ ಬಾಯಿಯನ್ನು ಮುಚ್ಚಿಡಲು ಸಾಧ್ಯವಾಗದಿದ್ದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟು, ಕೈಯ ಮೂಲಕ ಬಾಯಿಯನ್ನು ಮುಚ್ಚಬೇಕು.
  2. ಎಲ್ಲಾ ಸಂದರ್ಭಗಳಲ್ಲೂ ಇಸ್ಲಾಂ ಕಲಿಸುವ ಶಿಷ್ಟಾಚಾರಗಳಿಗೆ ಅಂಟಿಕೊಂಡಿರಬೇಕೆಂದು ತಿಳಿಸಲಾಗಿದೆ. ಏಕೆಂದರೆ ಅವು ಪರಿಪೂರ್ಣತೆ ಮತ್ತು ಗುಣನಡತೆಗಳ ಸಾಕಾರರೂಪವಾಗಿವೆ.
  3. ಶೈತಾನನು ಮನುಷ್ಯನೊಳಗೆ ಪ್ರವೇಶಿಸಬಹುದಾದ ಎಲ್ಲಾ ದ್ವಾರಗಳ ಬಗ್ಗೆ ಎಚ್ಚರಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ الأسامية الهولندية الغوجاراتية الرومانية المجرية الموري الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು