عَنْ عُمَرَ رضي الله عنه قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«مَنْ لَبِسَ الحَرِيرَ فِي الدُّنْيَا لَمْ يَلْبَسْهُ فِي الآخِرَةِ».
[صحيح] - [متفق عليه] - [صحيح البخاري: 5834]
المزيــد ...
ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಇಹಲೋಕದಲ್ಲಿ ರೇಷ್ಮೆ ಧರಿಸಿದವನು ಪರಲೋಕದಲ್ಲಿ ಅದನ್ನು ಧರಿಸುವುದಿಲ್ಲ."
[صحيح] - [متفق عليه] - [صحيح البخاري - 5834]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಹಲೋಕದಲ್ಲಿ ರೇಷ್ಮೆ ಧರಿಸುವ ಪುರುಷರು ಅದಕ್ಕಾಗಿ ಪಶ್ಚಾತ್ತಾಪಪಡದಿದ್ದರೆ, ಅವರು ಪರಲೋಕದಲ್ಲಿ ಅದನ್ನು ಧರಿಸುವುದಿಲ್ಲ. ಇದು ಅವರಿಗಿರುವ ಶಿಕ್ಷೆಯಾಗಿದೆ.