عَنْ أَبِي هُرَيْرَةَ رضي الله عنه، عَنِ النَّبِيِّ صَلَّى اللَّهُ عَلَيْهِ وَسَلَّمَ قَالَ:
«مَا جَلَسَ قَوْمٌ مَجْلِسًا لَمْ يَذْكُرُوا اللَّهَ فِيهِ وَلَمْ يُصَلُّوا عَلَى نَبِيِّهِمْ إِلاَّ كَانَ عَلَيْهِمْ تِرَةً، فَإِنْ شَاءَ عَذَّبَهُمْ وَإِنْ شَاءَ غَفَرَ لَهُمْ».
[صحيح] - [رواه أبو داود والترمذي والنسائي في الكبرى] - [سنن الترمذي: 3380]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಜನರು ಒಂದು ಸಭೆಯಲ್ಲಿ ಕುಳಿತುಕೊಂಡಾಗ, ಅವರು ಅಲ್ಲಾಹನನ್ನು ಸ್ಮರಿಸದೆ ಮತ್ತು ತಮ್ಮ ಪ್ರವಾದಿಯ ಮೇಲೆ ದುರೂದ್ (ಸಲಾತ್) ಹೇಳದೆ ಇದ್ದರೆ, ಅದು ಅವರಿಗೆ ಕೊರತೆಯಾಗದೆ ಇರುವುದಿಲ್ಲ. ಅವನು ಬಯಸಿದರೆ ಅವರನ್ನು ಶಿಕ್ಷಿಸುವನು ಮತ್ತು ಅವನು ಬಯಸಿದರೆ ಅವರನ್ನು ಕ್ಷಮಿಸುವನು."
[صحيح] - - [سنن الترمذي - 3380]
ಅಲ್ಲಾಹನ ಸ್ಮರಣೆಯ ಬಗ್ಗೆ ನಿರ್ಲಕ್ಷ್ಯರಾಗುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸಿದ್ದಾರೆ. ಅದು ಹೇಗೆಂದರೆ, ಯಾವುದೇ ಜನರು ಒಂದು ಸಭೆಯಲ್ಲಿ ಕುಳಿತುಕೊಂಡಾಗ, ಅವರು ಅಲ್ಲಾಹನನ್ನು ಸ್ಮರಿಸದೆ ಮತ್ತು ಅವನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ದುರೂದ್ (ಸಲಾತ್) ಹೇಳದೆ ಇದ್ದರೆ, ಆ ಸಭೆಯು ಪುನರುತ್ಥಾನ ದಿನದಂದು ಅವರಿಗೆ ವಿಷಾದ, ಪಶ್ಚಾತ್ತಾಪ, ನಷ್ಟ ಮತ್ತು ಕೊರತೆಗೆ ಕಾರಣವಾಗುತ್ತದೆ. ಆಗ ಅಲ್ಲಾಹು ಬಯಸಿದರೆ ಅವರ ಹಿಂದಿನ ಪಾಪಗಳು ಮತ್ತು ಮುಂದಿನ ಲೋಪಗಳಿಗಾಗಿ ಅವರನ್ನು ಶಿಕ್ಷಿಸಬಹುದು. ಅವನು ಬಯಸಿದರೆ ತನ್ನ ಔದಾರ್ಯ ಮತ್ತು ಕರುಣೆಯಿಂದ ಅವರನ್ನು ಕ್ಷಮಿಸಲೂ ಬಹುದು.