عَنْ أَبِي شُرَيْحٍ رضي الله عنه أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«وَاللَّهِ لاَ يُؤْمِنُ، وَاللَّهِ لاَ يُؤْمِنُ، وَاللَّهِ لاَ يُؤْمِنُ»، قِيلَ: وَمَنْ يَا رَسُولَ اللَّهِ؟ قَالَ: «الَّذِي لاَ يَأْمَنُ جَارُهُ بَوَايِقَهُ».
[صحيح] - [رواه البخاري] - [صحيح البخاري: 6016]
المزيــد ...
ಅಬೂ ಶುರೈಹ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ!". ಕೇಳಲಾಯಿತು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರು?" ಅವರು ಹೇಳಿದರು: "ಯಾರ ಕೆಡುಕುಗಳಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನು".
[صحيح] - [رواه البخاري] - [صحيح البخاري - 6016]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡಿದರು ಮತ್ತು (ವಿಷಯದ ಗಂಭೀರತೆಯನ್ನು ವ್ಯಕ್ತಪಡಿಸಲು) ಅದನ್ನು ಮೂರು ಬಾರಿ ಪುನರುಚ್ಛರಿಸಿದರು. ನಂತರ ಅವರು ಹೇಳಿದರು: ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ. ಆಗ ಸಹಾಬಾಗಳು ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಸತ್ಯವಿಶ್ವಾಸಿಯಾಗದವರು ಯಾರು? ಅವರು ಹೇಳಿದರು: ಯಾರ ವಂಚನೆ, ಅನ್ಯಾಯ ಮತ್ತು ಕೆಡುಕನ್ನು ಅವನ ನೆರೆಯವನು ಭಯಪಡುತ್ತಾನೋ ಅವನು.