عَنْ أَبِي هُرَيْرَةَ رَضيَ اللهُ عنهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«انْظُرُوا إِلَى مَنْ أَسْفَلَ مِنْكُمْ، وَلَا تَنْظُرُوا إِلَى مَنْ هُوَ فَوْقَكُمْ، فَهُوَ أَجْدَرُ أَلَّا تَزْدَرُوا نِعْمَةَ اللهِ عَلَيْكُمْ».
[صحيح] - [متفق عليه] - [صحيح مسلم: 2963]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"(ಲೌಕಿಕ ವಿಷಯಗಳಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿರಿ. ಏಕೆಂದರೆ, ಅಲ್ಲಾಹು ನಿಮಗೆ ನೀಡಿದ ಅನುಗ್ರಹಗಳನ್ನು ನೀವು ಕೀಳಾಗಿ ಕಾಣದಿರಲು ಇದು ಹೆಚ್ಚು ಸೂಕ್ತವಾಗಿದೆ."
[صحيح] - [متفق عليه] - [صحيح مسلم - 2963]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮುಸಲ್ಮಾನನಿಗೆ ಆದೇಶಿಸುವುದೇನೆಂದರೆ, ಅವನು ಲೌಕಿಕ ವಿಷಯಗಳಲ್ಲಿ - ಸ್ಥಾನಮಾನ, ಸಂಪತ್ತು, ಪ್ರತಿಷ್ಠೆ ಇತ್ಯಾದಿಗಳಲ್ಲಿ - ತನ್ನ ಸ್ಥಿತಿಗಿಂತ ಕೆಳಗಿರುವವರನ್ನು ಮತ್ತು ಕಡಿಮೆ ಇರುವವರನ್ನು ನೋಡಬೇಕು, ಮತ್ತು ಲೌಕಿಕ ವಿಷಯಗಳಲ್ಲಿ ತನಗಿಂತ ಮೇಲಿರುವವರನ್ನು ಮತ್ತು ಉತ್ತಮ ಸ್ಥಿತಿಯಲ್ಲಿರುವವರನ್ನು ನೋಡಬಾರದು. ಏಕೆಂದರೆ, ಕೆಳಗಿರುವವರನ್ನು ನೋಡುವುದು, ಅಲ್ಲಾಹು ನಿಮಗೆ ನೀಡಿದ ಅನುಗ್ರಹವನ್ನು ನೀವು ಕೀಳಾಗಿ ಕಾಣದಿರಲು ಮತ್ತು ತಿರಸ್ಕರಿಸದಿರಲು ಹೆಚ್ಚು ಅರ್ಹ ಮತ್ತು ಸೂಕ್ತವಾಗಿದೆ.