عن أبي سعيد الخدري رضي الله عنه قال: قال رسول الله صلى الله عليه وسلم:
«الحَسَن والحُسَيْن سَيِّدا شَباب أهْل الجنة».
[صحيح] - [رواه الترمذي وأحمد] - [سنن الترمذي: 3768]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಹಸನ್ ಮತ್ತು ಹುಸೈನ್ ಸ್ವರ್ಗದ ಯುವಕರ ಮುಖಂಡರಾಗಿದ್ದಾರೆ."
[صحيح] - [رواه الترمذي وأحمد] - [سنن الترمذي - 3768]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಇಬ್ಬರು ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್ (ಇವರು ಅಲಿ ಬಿನ್ ಅಬೂತಾಲಿಬ್ ಮತ್ತು ಫಾತಿಮ ಬಿಂತ್ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಮಕ್ಕಳು) (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಯೌವ್ವನದಲ್ಲಿ ನಿಧನರಾಗಿ ಸ್ವರ್ಗವನ್ನು ಪ್ರವೇಶಿಸಿದವರ ಮುಖಂಡರು ಮತ್ತು ಶ್ರೇಷ್ಠರಾಗಿದ್ದಾರೆ. ಅಥವಾ ಅವರು ಪ್ರವಾದಿಗಳು ಮತ್ತು ಖುಲಫಾಉರ್‍ರಾಶಿದೀನ್ ಗಳನ್ನು ಹೊರತುಪಡಿಸಿ ಉಳಿದ ಸ್ವರ್ಗದ ಯುವಕರಿಗೆ ಮುಖಂಡರಾಗಿದ್ದಾರೆ.