عَنْ عَبْدِ اللَّهِ بْنِ عُمَرَ رَضِيَ اللَّهُ عَنْهُمَا: أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«إِنَّ أَحَدَكُمْ إِذَا مَاتَ عُرِضَ عَلَيْهِ مَقْعَدُهُ بِالْغَدَاةِ وَالعَشِيِّ، إِنْ كَانَ مِنْ أَهْلِ الجَنَّةِ فَمِنْ أَهْلِ الجَنَّةِ، وَإِنْ كَانَ مِنْ أَهْلِ النَّارِ فَمِنْ أَهْلِ النَّارِ، فَيُقَالُ: هَذَا مَقْعَدُكَ حَتَّى يَبْعَثَكَ اللَّهُ يَوْمَ القِيَامَةِ».
[صحيح] - [متفق عليه] - [صحيح البخاري: 1379]
المزيــد ...
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ಮರಣ ಹೊಂದಿದರೆ, (ಪರಲೋಕದಲ್ಲಿರುವ) ಅವನ ಸ್ಥಾನವನ್ನು ಅವನಿಗೆ ಬೆಳಿಗ್ಗೆ ಮತ್ತು ಸಂಜೆ ತೋರಿಸಲಾಗುತ್ತದೆ. ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗಿದ್ದರೆ ಸ್ವರ್ಗದ (ಸ್ಥಾನವನ್ನು) ಮತ್ತು ನರಕವಾಸಿಗಳಲ್ಲಿ ಸೇರಿದವನಾಗಿದ್ದರೆ ನರಕದ ಸ್ಥಾನವನ್ನು ತೋರಿಸಲಾಗುತ್ತದೆ. ನಂತರ ಅವನಿಗೆ ಹೇಳಲಾಗುತ್ತದೆ: 'ಅಲ್ಲಾಹು ನಿನ್ನನ್ನು ಪುನರುತ್ಥಾನ ದಿನದಂದು ಎಬ್ಬಿಸುವವರೆಗೆ ಇದೇ ನಿನ್ನ ಸ್ಥಾನವಾಗಿದೆ' ".
[صحيح] - [متفق عليه] - [صحيح البخاري - 1379]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಬ್ಬ ದಾಸನು ಮರಣ ಹೊಂದಿದಾಗ, ಅವನಿಗೆ ಸ್ವರ್ಗ ಅಥವಾ ನರಕದಲ್ಲಿರುವ ಅವನ ನಿರ್ದಿಷ್ಟ ನಿವಾಸ ಮತ್ತು ಸ್ಥಾನವನ್ನು ಬೆಳಿಗ್ಗೆ ಮತ್ತು ಸಂಜೆ ತೋರಿಸಲಾಗುತ್ತದೆ. ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗಿದ್ದರೆ ಸ್ವರ್ಗದಲ್ಲಿನ ಅವನ ಸ್ಥಾನ, ಮತ್ತು ಅವನು ನರಕವಾಸಿಗಳಲ್ಲಿ ಸೇರಿದವನಾಗಿದ್ದರೆ ನರಕದಲ್ಲಿನ ಅವನ ಸ್ಥಾನ. ಅವನೊಂದಿಗೆ ಹೇಳಲಾಗುತ್ತದೆ: ಪುನರುತ್ಥಾನ ದಿನದಂದು ನಿನ್ನನ್ನು ಕಳುಹಿಸಲಾಗುವ ನಿನ್ನ ಸ್ಥಾನ ಇದೇ. ಇದರಲ್ಲಿ ಸತ್ಯವಿಶ್ವಾಸಿಗೆ ಸುಖಾನುಗ್ರಹಗಳಿವೆ ಮತ್ತು ಸತ್ಯನಿಷೇಧಿಗೆ ಶಿಕ್ಷೆಯಿದೆ.د