+ -

عن تَميم الداري رضي الله عنه، قال: سمعتُ رسول الله صلى الله عليه وسلم يقول:
«‌لَيَبْلُغَنَّ ‌هَذَا الأَمْرُ مَا بَلَغَ اللَّيْلُ وَالنَّهَارُ، وَلَا يَتْرُكُ اللهُ بَيْتَ مَدَرٍ وَلَا وَبَرٍ إِلَّا أَدْخَلَهُ اللهُ هَذَا الدِّينَ، بِعِزِّ عَزِيزٍ أَوْ بِذُلِّ ذَلِيلٍ، عِزًّا يُعِزُّ اللهُ بِهِ الإِسْلَامَ، وَذُلًّا يُذِلُّ اللهُ بِهِ الكُفْرَ» وَكَانَ تَمِيمٌ الدَّارِيُّ يَقُولُ: قَدْ عَرَفْتُ ذَلِكَ فِي أَهْلِ بَيْتِي، لَقَدْ أَصَابَ مَنْ أَسْلَمَ مِنْهُمُ الْخَيْرُ وَالشَّرَفُ وَالْعِزُّ، وَلَقَدْ أَصَابَ مَنْ كَانَ مِنْهُمْ كَافِرًا الذُّلُّ وَالصَّغَارُ وَالْجِزْيَةُ.

[صحيح] - [رواه أحمد] - [مسند أحمد: 16957]
المزيــد ...

ತಮೀಮುದ್ದಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಶ್ಚಯವಾಗಿಯೂ ರಾತ್ರಿ ಮತ್ತು ಹಗಲು ತಲುಪುವ ಎಲ್ಲಾ ಸ್ಥಳಗಳಿಗೂ ಈ ವಿಷಯವು ತಲುಪಲಿದೆ. ಅಲ್ಲಾಹು ಪಟ್ಟಣದಲ್ಲಿ ಅಥವಾ ಮರುಭೂಮಿಯಲ್ಲಿರುವ ಯಾವುದೇ ಮನೆಗೂ ಈ ಧರ್ಮವು ಪ್ರವೇಶವಾಗುವಂತೆ ಮಾಡದೆ ಬಿಡಲಾರ. ಅದು ಗೌರವಾನ್ವಿತರಿಗೆ ಗೌರವವನ್ನು ಅಥವಾ ಅವಮಾನಿತರಿಗೆ ಅವಮಾನವನ್ನು ತರಲಿದೆ. ಅದು ಅಲ್ಲಾಹು ಇಸ್ಲಾಂ ಧರ್ಮದ ಮೂಲಕ ನೀಡುವ ಗೌರವ ಮತ್ತು ಸತ್ಯನಿಷೇಧದ ಮೂಲಕ ನೀಡುವ ಅವಮಾನವಾಗಿದೆ." ತಮೀಮುದ್ದಾರಿ ಹೇಳುತ್ತಿದ್ದರು: ನಾನು ಅದನ್ನು ನನ್ನ ಕುಟುಂಬದವರಲ್ಲೇ ಗುರುತಿಸಿದ್ದೇನೆ. ಅವರಲ್ಲಿ ಇಸ್ಲಾಂ ಸ್ವೀಕರಿಸಿದವರೆಲ್ಲರಿಗೂ ಒಳಿತು, ಘನತೆ ಮತ್ತು ಗೌರವಗಳು ಉಂಟಾಗಿವೆ. ಅವರಲ್ಲಿ ಸತ್ಯನಿಷೇಧಿಗಳಾದ ಎಲ್ಲರಿಗೂ ಅವಮಾನ, ತಿರಸ್ಕಾರ ಮತ್ತು ತೆರಿಗೆ ಉಂಟಾಗಿವೆ.

[صحيح] - [رواه أحمد] - [مسند أحمد - 16957]

ವಿವರಣೆ

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಈ ಧರ್ಮವು ಭೂಮಿಯ ಎಲ್ಲಾ ಭಾಗಗಳಿಗೂ ತಲುಪಲಿದೆ. ಎಲ್ಲಿಗೆಲ್ಲಾ ರಾತ್ರಿ ಮತ್ತು ಹಗಲು ತಲುಪುತ್ತದೋ ಅಲ್ಲಿಗೆಲ್ಲಾ ಈ ಧರ್ಮವು ತಲುಪಲಿದೆ. ಅಲ್ಲಾಹು ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ಅಡವಿಗಳಲ್ಲಿ ಅಥವಾ ಮರುಭೂಮಿಗಳಲ್ಲಿರುವ ಯಾವುದೇ ಒಂದು ಮನೆಯನ್ನೂ, ಅದಕ್ಕೆ ಈ ಧರ್ಮವನ್ನು ಪ್ರವೇಶ ಮಾಡಿಸದೆ ಬಿಡಲಾರ. ಯಾರು ಈ ಧರ್ಮವನ್ನು ಸ್ವೀಕರಿಸಿ ಇದರಲ್ಲಿ ವಿಶ್ವಾಸವಿಡುತ್ತಾರೋ ಅವರು ಇಸ್ಲಾಮಿನ ಗೌರವದ ಮೂಲಕ ಗೌರವಾನ್ವಿತರಾಗುತ್ತಾರೆ. ಯಾರು ಇದನ್ನು ತಿರಸ್ಕರಿಸಿ ಇದನ್ನು ನಿಷೇಧಿಸುತ್ತಾರೋ ಅವರು ಅವಮಾನಿತರು ಮತ್ತು ತಿರಸ್ಕಾರಯೋಗ್ಯರಾಗುತ್ತಾರೆ.
ನಂತರ ಸಹಾಬಿವರ್ಯರಾದ ತಮೀಮುದ್ದಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ ಈ ವಿಷಯವನ್ನು ಅವರು ವಿಶೇಷವಾಗಿ ತಮ್ಮ ಕುಟುಂಬದವರಲ್ಲೇ ಗುರುತಿಸಿದ್ದಾರೆ. ಏಕೆಂದರೆ, ಅವರಲ್ಲಿ ಇಸ್ಲಾಂ ಸ್ವೀಕರಿಸಿದವರೆಲ್ಲರೂ ಘನತೆ-ಗೌರವಗಳನ್ನು ಪಡೆದಿದ್ದಾರೆ. ಅವರಲ್ಲಿ ನಿಷೇಧಿಸಿದವರೆಲ್ಲರೂ ತಮ್ಮ ಸಂಪತ್ತಿನಿಂದ ಮುಸ್ಲಿಮರಿಗೆ ತೆರಿಗೆ ಪಾವತಿ ಮಾಡಬೇಕಾಗಿ ಬಂದಿರುವುದರ ಹೊರತಾಗಿಯೂ ಅವಮಾನ ಮತ್ತು ತಿರಸ್ಕಾರವನ್ನು ಪಡೆದಿದ್ದಾರೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الدرية الصربية الصومالية الكينياروندا الرومانية الموري المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಮುಸಲ್ಮಾನರಿಗೆ ಅವರ ಧರ್ಮವು ಭೂಮಿಯ ಎಲ್ಲಾ ಭಾಗಗಳಿಗೂ ಹರಡಲಿದೆಯೆಂದು ಸುವಾರ್ತೆ ನೀಡಲಾಗಿದೆ.
  2. ಗೌರವವಿರುವುದು ಇಸ್ಲಾಂ ಮತ್ತು ಮುಸ್ಲಿಮರಿಗೆ. ಅವಮಾನವಿರುವುದು ಸತ್ಯನಿಷೇಧ ಮತ್ತು ಸತ್ಯನಿಷೇಧಿಗಳಿಗೆ.
  3. ಇದರಲ್ಲಿ ಪ್ರವಾದಿತ್ವದ ಪುರಾವೆ ಮತ್ತು ಅದರ ಒಂದು ಚಿಹ್ನೆಯಿದೆ. ಅದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದಂತೆಯೇ ಅದು ಸಂಭವಿಸಿದೆ.
ಇನ್ನಷ್ಟು