عَنْ عُثْمَانَ الشَّحَّامِ، قَالَ: انْطَلَقْتُ أَنَا وَفَرْقَدٌ السَّبَخِيُّ إِلَى مُسْلِمِ بْنِ أَبِي بَكْرَةَ وَهُوَ فِي أَرْضِهِ، فَدَخَلْنَا عَلَيْهِ فَقُلْنَا: هَلْ سَمِعْتَ أَبَاكَ يُحَدِّثُ فِي الْفِتَنِ حَدِيثًا؟ قَالَ: نَعَمْ، سَمِعْتُ أَبَا بَكْرَةَ رضي الله عنه يُحَدِّثُ، قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِنَّهَا سَتَكُونُ فِتَنٌ، أَلَا ثُمَّ تَكُونُ فِتْنَةٌ الْقَاعِدُ فِيهَا خَيْرٌ مِنَ الْمَاشِي فِيهَا، وَالْمَاشِي فِيهَا خَيْرٌ مِنَ السَّاعِي إِلَيْهَا، أَلَا فَإِذَا نَزَلَتْ أَوْ وَقَعَتْ فَمَنْ كَانَ لَهُ إِبِلٌ فَلْيَلْحَقْ بِإِبِلِهِ، وَمَنْ كَانَتْ لَهُ غَنَمٌ فَلْيَلْحَقْ بِغَنَمِهِ، وَمَنْ كَانَتْ لَهُ أَرْضٌ فَلْيَلْحَقْ بِأَرْضِهِ»، قَالَ فَقَالَ رَجُلٌ: يَا رَسُولَ اللهِ أَرَأَيْتَ مَنْ لَمْ يَكُنْ لَهُ إِبِلٌ وَلَا غَنَمٌ وَلَا أَرْضٌ؟ قَالَ: «يَعْمِدُ إِلَى سَيْفِهِ فَيَدُقُّ عَلَى حَدِّهِ بِحَجَرٍ، ثُمَّ لِيَنْجُ إِنِ اسْتَطَاعَ النَّجَاءَ، اللهُمَّ هَلْ بَلَّغْتُ؟ اللهُمَّ هَلْ بَلَّغْتُ؟ اللهُمَّ هَلْ بَلَّغْتُ؟»، قَالَ: فَقَالَ رَجُلٌ: يَا رَسُولَ اللهِ أَرَأَيْتَ إِنْ أُكْرِهْتُ حَتَّى يُنْطَلَقَ بِي إِلَى أَحَدِ الصَّفَّيْنِ، أَوْ إِحْدَى الْفِئَتَيْنِ، فَضَرَبَنِي رَجُلٌ بِسَيْفِهِ، أَوْ يَجِيءُ سَهْمٌ فَيَقْتُلُنِي؟ قَالَ: «يَبُوءُ بِإِثْمِهِ وَإِثْمِكَ، وَيَكُونُ مِنْ أَصْحَابِ النَّارِ».
[صحيح] - [رواه مسلم] - [صحيح مسلم: 2887]
المزيــد ...
ಉಸ್ಮಾನ್ ಅಶ್ಶಹ್ಹಾಮ್ ರಿಂದ ವರದಿ: ಅವರು ಹೇಳಿದರು: ನಾನು ಮತ್ತು ಫರ್ಕದ್ ಸಬಖಿ ರವರು ಮುಸ್ಲಿಂ ಬಿನ್ ಅಬೂ ಬಕ್ರ ರವರ ಬಳಿಗೆ ಹೋದೆವು. ಅವರು ತಮ್ಮ ಜಮೀನಿನಲ್ಲಿದ್ದರು. ನಾವು ಅವರ ಬಳಿ ಪ್ರವೇಶಿಸಿ ಕೇಳಿದೆವು: ನಿಮ್ಮ ತಂದೆಯವರು ಫಿತ್ನದ (ಪರೀಕ್ಷೆ) ಬಗ್ಗೆ ಹದೀಸ್ ಹೇಳುವುದನ್ನು ನೀವು ಕೇಳಿದ್ದೀರಾ? ಅವರು ಹೇಳಿದರು: ಹೌದು, ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹದೀಸ್ ಹೇಳುವುದನ್ನು ನಾನು ಕೇಳಿದ್ದೇನೆ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಮುಂದೆ ಫಿತ್ನಾಗಳು (ಪರೀಕ್ಷೆಗಳು) ಸಂಭವಿಸಲಿವೆ. ತಿಳಿಯಿರಿ! ನಂತರ ಒಂದು ಫಿತ್ನಾ ಬರುತ್ತದೆ. ಅದರಲ್ಲಿ ಕುಳಿತವನು ಅದರಲ್ಲಿ ನಡೆಯುವವನಿಗಿಂತ ಉತ್ತಮನು, ಮತ್ತು ಅದರಲ್ಲಿ ನಡೆಯುವವನು ಅದರ ಕಡೆಗೆ ಓಡುವವನಿಗಿಂತ ಉತ್ತಮನು. ತಿಳಿಯಿರಿ! ಅದು ಬಂದಾಗ ಅಥವಾ ಸಂಭವಿಸಿದಾಗ, ಯಾರ ಬಳಿ ಒಂಟೆಗಳಿವೆಯೋ ಅವರು ತಮ್ಮ ಒಂಟೆಗಳೊಂದಿಗೆ ಸೇರಿಕೊಳ್ಳಲಿ, ಯಾರ ಬಳಿ ಕುರಿಗಳಿವೆಯೋ ಅವರು ತಮ್ಮ ಕುರಿಗಳೊಂದಿಗೆ ಸೇರಿಕೊಳ್ಳಲಿ, ಮತ್ತು ಯಾರ ಬಳಿ ಭೂಮಿ ಇದೆಯೋ ಅವರು ತಮ್ಮ ಭೂಮಿಯೊಂದಿಗೆ ಸೇರಿಕೊಳ್ಳಲಿ". ವರದಿಗಾರ ಹೇಳಿದರು: ಆಗ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರ ಬಳಿ ಒಂಟೆಗಳು, ಕುರಿಗಳು ಮತ್ತು ಭೂಮಿಯು ಇಲ್ಲವೋ ಅವರ ಬಗ್ಗೆ ನೀವೇನು ಹೇಳುತ್ತೀರಿ?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಅಂಚನ್ನು ಕಲ್ಲಿನಿಂದ ಜಜ್ಜಲಿ, ನಂತರ ಸಾಧ್ಯವಾದರೆ ತಪ್ಪಿಸಿಕೊಳ್ಳಲಿ. ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್, ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ?". ವರದಿಗಾರ ಹೇಳಿದರು: ಆಗ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ನನ್ನನ್ನು ಒತ್ತಾಯಪೂರ್ವಕವಾಗಿ ಎರಡು ಗುಂಪುಗಳ ಪೈಕಿ ಒಂದಕ್ಕೆ ಅಥವಾ ಎರಡು ಪಕ್ಷಗಳ ಪೈಕಿ ಒಂದಕ್ಕೆ ಕರೆದೊಯ್ಯಲಾಗಿ, ಒಬ್ಬ ವ್ಯಕ್ತಿ ತನ್ನ ಖಡ್ಗದಿಂದ ನನಗೆ ಹೊಡೆದರೆ, ಅಥವಾ ಒಂದು ಬಾಣ ಬಂದು ನನ್ನನ್ನು ಕೊಂದರೆ (ನನ್ನ ಗತಿಯೇನು?)". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು (ಕೊಲೆಗಾರ) ತನ್ನ ಪಾಪ ಮತ್ತು ನಿನ್ನ ಪಾಪದೊಂದಿಗೆ ಮರಳುತ್ತಾನೆ, ಮತ್ತು ಅವನು ನರಕವಾಸಿಗಳಲ್ಲಿ ಒಬ್ಬನಾಗುತ್ತಾನೆ".
[صحيح] - [رواه مسلم] - [صحيح مسلم - 2887]
ಉಸ್ಮಾನ್ ಶಹ್ಹಾಮ್ ಮತ್ತು ಫರ್ಕದ್ ಸಬಖಿ ರವರು ಶ್ರೇಷ್ಠ ಸಹಾಬಿವರ್ಯರಾದ ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಮಗ ಮುಸ್ಲಿಂ ರೊಂದಿಗೆ ಕೇಳಿದರು: ಮುಸ್ಲಿಮರ ನಡುವೆ ನಡೆಯುವ ಫಿತ್ನಾಗಳು ಮತ್ತು ಯುದ್ಧಗಳ ಬಗ್ಗೆ ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿಮ್ಮ ತಂದೆ ಹದೀಸ್ ಹೇಳಿದ್ದನ್ನು ನೀವು ಕೇಳಿದ್ದೀರಾ? ಅವರು ಹೌದು ಎಂದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮರಣದ ನಂತರ ಫಿತ್ನಾಗಳು ಸಂಭವಿಸಲಿವೆ ಎಂದು ತಿಳಿಸಿದರು. ಈ ಫಿತ್ನಾಗಳು ನಡೆಯುವಾಗ, ಅದರ ಬಗ್ಗೆ ಗಮನಹರಿಸದೆ ಕುಳಿತಿರುವನು, ಅದರಲ್ಲಿ ಭಾಗವಹಿಸದೆ ಮತ್ತು ಅದನ್ನು ಹುಡುಕದೆ ನಡೆಯುವವನಿಗಿಂತ ಉತ್ತಮನು. ಅದರಲ್ಲಿ ನಡೆಯುವವನು, ಅದನ್ನು ಹುಡುಕುತ್ತಾ ಮತ್ತು ಅದರಲ್ಲಿ ಭಾಗವಹಿಸುತ್ತಾ ಅದರ ಕಡೆಗೆ ವೇಗವಾಗಿ ಧಾವಿಸುವವನಿಗಿಂತ ಉತ್ತಮನು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿರ್ದೇಶನ ನೀಡುವುದೇನೆಂದರೆ, ಯಾರ ಕಾಲದಲ್ಲಿ ಫಿತ್ನಾ ಬರುತ್ತದೆಯೋ ಅಥವಾ ಸಂಭವಿಸುತ್ತದೆಯೋ ಅವರಿಗೆ ಯಾವುದಾದರೂ ಆಶ್ರಯ ಸಿಕ್ಕರೆ ಅದರಲ್ಲಿ ಆಶ್ರಯ ಪಡೆಯಲಿ. ಯಾರ ಬಳಿ ಮೇಯುವ ಒಂಟೆಗಳಿವೆಯೋ ಅವರು ತಮ್ಮ ಒಂಟೆಗಳೊಂದಿಗೆ ಸೇರಿಕೊಳ್ಳಲಿ. ಯಾರ ಬಳಿ ಮೇಯುವ ಕುರಿಗಳಿವೆಯೋ ಅವರು ತಮ್ಮ ಕುರಿಗಳೊಂದಿಗೆ ಸೇರಿಕೊಳ್ಳಲಿ. ಯಾರ ಬಳಿ ಭೂಮಿ ಮತ್ತು ತೋಟವಿದೆಯೋ ಅವರು ತಮ್ಮ ಭೂಮಿಯೊಂದಿಗೆ ಸೇರಿಕೊಳ್ಳಲಿ. ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಒಂಟೆ, ಕುರಿ ಅಥವಾ ಭೂಮಿಯ ಆಶ್ರಯವಿಲ್ಲದವರ ಬಗ್ಗೆ ನೀವೇನು ಹೇಳುತ್ತೀರಿ? ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನು ತನ್ನ ಆಯುಧವನ್ನು ತೆಗೆದುಕೊಂಡು ಅದನ್ನು ಜಜ್ಜಿ ಉಪಯೋಗಕ್ಕೆ ಬರದಂತೆ ಮಾಡಲಿ. ನಂತರ ಸಾಧ್ಯವಾದರೆ ತಾನು ಮತ್ತು ತನ್ನ ಮಕ್ಕಳೊಂದಿಗೆ ತಪ್ಪಿಸಿಕೊಳ್ಳಲಿ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮೂರು ಬಾರಿ ಸಾಕ್ಷಿಯಾಗಿಸಿದರು: ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ನನ್ನನ್ನು ಎರಡು ಗುಂಪುಗಳಲ್ಲಿ ಒಂದರೊಂದಿಗೆ ಅಥವಾ ಎರಡು ಪಕ್ಷಗಳಲ್ಲಿ ಒಂದರೊಂದಿಗೆ ಸೇರಿಕೊಳ್ಳಲು ಒತ್ತಾಯಪಡಿಸಲಾಗಿ, ಒಬ್ಬ ವ್ಯಕ್ತಿಯು ತನ್ನ ಖಡ್ಗದಿಂದ ನನಗೆ ಹೊಡೆದರೆ, ಅಥವಾ ಒಂದು ಬಾಣ ಬಂದು ನನ್ನನ್ನು ಕೊಂದರೆ (ನನ್ನ ಗತಿಯೇನು)? ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನು (ಕೊಲೆಗಾರ) ತನ್ನ ಪಾಪ ಮತ್ತು ಕೊಲೆಯಾದವನ ಪಾಪದೊಂದಿಗೆ ಮರಳುತ್ತಾನೆ, ಮತ್ತು ಅವನು (ಪುನರುತ್ಥಾನ) ದಿನದಂದು ನರಕವಾಸಿಗಳಲ್ಲಿ ಒಬ್ಬನಾಗುತ್ತಾನೆ.